

ಕೋಟ: ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಪ್ರಯುಕ್ತ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ನೇತೃತ್ವದಲ್ಲಿ 48ನೇ ಸರಣಿ ಕಾರ್ಯಕ್ರಮ ಭಾನುವಾರ ನಡೆಯಿತು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಚಾಲನೆ ನೀಡಿದರು. ಕಷಿ ಮತ್ತು ಹೈನುಗಾರಿಕಾ ಕ್ಷೇತ್ರದ ಸಾಧಕಿ ಶಾರದ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೀತಾರಾಮ ಶೆಟ್ಟಿ ಕೊಯ್ಕೂರು, ಶರತ್ ಕುವಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಮಹೇಶ್ ಶೆಟ್ಟಿ, ಎಂ.ಜಯರಾಮ ಶೆಟ್ಟಿ, ಕೆ.ತಾರಾನಾಥ ಹೊಳ್ಳ , ಲಲಿತಾ ಪೂಜಾರಿ ಇದ್ದರು. ವಿಜಯ ಕುವಾರ್ ಶೆಟ್ಟಿ ಸ್ವಾಗತಿಸಿದರು. ಕೇಶವ ಆಚಾರ್ ಸನ್ಮಾನ ಪತ್ರ ವಾಚಿಸಿದರು. ರವೀಂದ್ರ ಕೋಟ ವಂದಿಸಿದರು. ಅಜಿತ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಗೀತಾನಂದ ಫೌಂಡೇಶನ್, ಗೆಳೆಯರ ಬಳಗ, ರೈತ ಧ್ವನಿ ಸಂ, ರೋಟರಿ ಕ್ಲಬ್, ಸ್ನೇಹಕೂಟ ಸಹಯೋಗ ವಹಿಸಿದ್ದವು.