ಗರಿಗೆದರಿದ ಕೃಷಿ ಚಟುವಟಿಕೆ, ಬಿತ್ತನೆಯತ್ತ ಮುಖ ಮಾಡಿದ ರೈತ

01 mbl ph 1
Published on

ಎ.ಅಪ್ಪಾಜಿಗೌಡ, ಮುಳಬಾಗಿಲು

ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಜೂನ್ 24ರಿಂದ 30ರವರೆಗೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ಮುಳಬಾಗಿಲಿನಲ್ಲಿ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ.

ತಾಲೂಕಿನಲ್ಲಿ ಭತ್ತ ನೀರಾವರಿ 1970 ಹೆಕ್ಟೇರ್, ಭತ್ತ ಖುಷ್ಕಿ 470 ಹೆಕ್ಟೇರ್, ರಾಗಿ ನೀರಾವರಿ 310 ಹೆಕ್ಟೇರ್, ರಾಗಿ ಖುಷ್ಕಿ 11300 ಹೆಕ್ಟೇರ್, ಹೈಬ್ರಿಡ್ ಮುಸುಕಿನ ಜೋಳ ನೀರಾವರಿ 82 ಹೆಕ್ಟೇರ್, ತೃಣಧಾನ್ಯ 30 ಹೆಕ್ಟೇರ್, ಅವರೆ 1700 ಹೆಕ್ಟೇರ್, ಅಲಸಂದಿ 540 ಹೆಕ್ಟೇರ್, ಸೂರ್ಯಕಾಂತಿ 30 ಹೆಕ್ಟೇರ್, ಹರಳು 25 ಹೆಕ್ಟೇರ್, ಸಾಸಿವೆ 100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಸಾಧನೆ ಮಾತ್ರ ಸೊನ್ನೆಯಾಗಿದೆ.

ಮೇವಿನ ಜೋಳ ಖುಷ್ಕಿ 30 ಹೆಕ್ಟೇರ್ ಇದ್ದರೆ 77 ಹೆಕ್ಟೇರ್ ಸಾಧನೆಯಾಗಿದೆ. ತೊಗರಿ 910 ಹೆಕ್ಟೇರ್‌ಗೆ 118 ಹೆಕ್ಟೇರ್, ನೆಲಗಡಲೆ 7700 ಹೆಕ್ಟೇರ್‌ಗೆ 2308 ಹೆಕ್ಟೇರ್, ಒಟ್ಟಾರೆ 25167 ಹೆಕ್ಟೇರ್‌ಗೆ 2418 ಹೆಕ್ಟೇರ್ ಬಿತ್ತನೆ ಜೂನ್ ತಿಂಗಳ ಸಾಧನೆಯಾಗಿದೆ.

ಜುಲೈ ತಿಂಗಳಲ್ಲಿ ಉತ್ತಮ ಬಿತ್ತನೆ ಕಾರ್ಯಗಳ ನಿರೀಕ್ಷೆಯಿದೆ, ಉತ್ತಮವಾಗಿ ಮಳೆಯಾದರೆ ಬಿತ್ತನೆ ಪ್ರಮಾಣವೂ ಹೆಚ್ಚಾಗುವ ಸಂಭವವಿದೆ. ರೈತರಿಗೆ ಬೇಕಾಗುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ಈಗಾಗಲೆ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ. ರಾಗಿ ದಾಸ್ತಾನು ಮುಗಿದಿದ್ದು 100 ಕ್ವಿಂಟಾಲ್ ರಾಗಿ ಇಂಡೆಂಟ್ ಮಾಡಿದ್ದು ಬಂದ ತಕ್ಷಣ ವಿತರಿಸಲು ಕೃಷಿ ಇಲಾಖೆ ಸಜ್ಜುಗೊಂಡಿದೆ.

ಈಗಾಗಲೆ ನೆಲಗಡಲೆ 502.03 ಕ್ವಿಂಟಾಲ್, ರಾಗಿ 188.4 ಕ್ವಿಂಟಾಲ್, ತೊಗರಿ 35.4 ಕ್ವಿಂಟಾಲ್, ಅಲಸಂದಿ 5.95 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.

88.4 ಮಿಮೀ ಮಳೆ: 2020ರಲ್ಲಿ ಮಳೆ ಕೊರತೆ ಉಂಟಾಗಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆ-ಕುಂಟೆಗಳಲ್ಲಿ ನೀರಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಜೂನ್ ಕೊನೇ ವಾರದಲ್ಲಿ 88.4 ಮಿಮೀ ಮಳೆಯಾಗಿದ್ದು ಬಿಟ್ಟರೆ ಒಟ್ಟಾರೆ ಮಳೆ ಪ್ರಮಾಣ ಕಡಿಮೆ. 2020ರ ಜ.6ರಂದು 10.6, ಮಾ.8ರಂದು 8.6, ಏ.9ರಂದು 15.8, 29ರಂದು 14.2, ಮೇ 18ರಂದು 9.2, 28ರಂದು 18.2, 30ರಂದು 40.8, 31ರಂದು 7.2, ಜೂ.24ರಂದು 10.2, 25ರಂದು 72.2, 28ರಂದು 3.8, 29ರಂದು 2.2ಮಿಮೀ ಮಳೆಯಾಗಿದ್ದು, ಒಟ್ಟಾರೆ 2020ರಲ್ಲಿ 204.04 ಮಿಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಮಳೆಯಾದರೆ ಪರಿಸ್ಥಿತಿ ಸುಧಾರಿಸಲಿದೆ.

ತಾಲೂಕಿನ 5 ಹೋಬಳಿ ಕೇಂದ್ರಗಳ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 100 ಕ್ವೀಂಟಾಲ್ ರಾಗಿ ಬೇಕಾಗಿದ್ದು ಈಗಾಗಲೆ ಇಂಡೆಂಟ್ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ವಿತರಿಸಲಾಗುವುದು. ಅಮರನಾರಾಯಣರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಮುಳಬಾಗಿಲು ಜೂನ್ ಕೊನೇ ವಾರದಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಜುಲೈನಲ್ಲಿ ಬಿತ್ತನೆ ಕಾರ್ಯಗಳು ಪೂರ್ಣಗೊಳ್ಳಲಿದೆ. ಬಿ.ಎನ್.ಶುಭಾ, ಸಹಾಯಕ ಕೃಷಿ ಅಧಿಕಾರಿ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net