

ಧಾರವಾಡ: ಚಿತ್ರದುರ್ಗದ ಅಕ್ಷತಾ ಕೆ.ವಿ. ೨ ಚಿನ್ನದ ಪದಕ ಪಡೆಯುವ ಮೂಲಕ ಕೃಷಿ ವಿಶ್ವವಿದ್ಯಾಲಯದ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದರು. ಕೃಷಿ ಮಹಾವಿದ್ಯಾಲಯದ ಚಿನ್ನದ ಪದಕ ಮತ್ತು ಕೃಷಿ ಸ್ನಾತಕ ಪದವಿಯಲ್ಲಿ ಹೆಚ್ಚಿನ ಒಜಿಪಿಎ (೯.೩೯೪/೧೦) ಗಳಿಸಿದ್ದಕ್ಕಾಗಿ ಸೀತಾರಾಂ ಜಿಂದಾಲ್ ಪ್ರತಿಷ್ಠಾನದ ಚಿನ್ನದ ಪದಕಗಳನ್ನು ಪಡೆದರು.
ಇವರ ತಂದೆ ವೆಂಕಟೇಶ ರೆಡ್ಡಿ ನ್ಯಾಯಾಂಗ ಇಲಾಖೆ ನಿವೃತ್ತ ಅಽಕಾರಿ, ತಾಯಿ ಸುಮಾ ಗೃಹಿಣಿ. ಪಿಯುಸಿವರೆಗೆ ಚಿತ್ರದುರ್ಗದಲ್ಲಿ ಶಿಕ್ಷಣ ಪೂರೈಸಿದ ಅಕ್ಷತಾ, ವೈದ್ಯಕೀಯ ಶಿಕ್ಷಣ ಓದಬೇಕೆಂಬ ಗುರಿ ಹೊಂದಿದ್ದರು. ಆದರೆ, ಕೃಷಿ ಪದವಿಗೆ ಸೀಟು ಸಿಕ್ಕಿತ್ತು. ಹೀಗಾಗಿ ಕೃಷಿ ಪದವಿಗೆ ಸೇರಿ ಇಲ್ಲೇ ಸಾಽಸಬೇಕು ಎಂಬ ಛಲ ತೊಟ್ಟರು. ಕೃಷಿ ಹಿನ್ನೆಲೆಯೇ ಇಲ್ಲದ ಕುಟುಂಬವಾಗಿದ್ದರಿAದ ಸವಾಲುಗಳನ್ನು ಎದುರಿಸಿದರು. ಅದಕ್ಕೆ ತಕ್ಕ ಪರಿಶ್ರಮ ಪಟ್ಟು, ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸದ್ಯ ಮೈಸೂರಿನಲ್ಲಿ ಅಗ್ರಿಕಲ್ಚರಲ್ ಆ್ಯಂಡ್ ಫುಡ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ (ಪಿಜಿಡಿಎ) ಓದುತ್ತಿರುವ ಇವರು, ಮ್ಯಾನೇಜ್‌ಮೆಂಟ್ ಕ್ಷೇತ್ರದ ಮೂಲಕ ಪರೋಕ್ಷವಾಗಿ ರೈತರಿಗೆ ನೆರವಾಗುವ ಗುರಿ ಹೊಂದಿದ್ದಾರೆ.
ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಚಿನ್ನದ ಪದಕ ಪ್ರದಾನ ಮಾಡಿ ಶುಭ ಕೋರಿದರು. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಐಸಿಎಆರ್ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್, ಕುಲಪತಿ ಡಾ. ಪಿ.ಎಲ್. ಪಾಟೀಲ, ಇತರರಿದ್ದರು.