ಭತ್ತ, ಕಬ್ಬುಗಳಿಗೆ ಕಾಂಪ್ಲೆಕ್ಸ್ ಗೊಬ್ಬರ ನೀಡಿ

Published on

* ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ಸಲಹೆ

ಶ್ರೀರಂಗಪಟ್ಟಣ : ತಾಲೂಕಿನಲ್ಲಿ ಪ್ರಸ್ತುತ ವರ್ಷ 9,150 ಹೆಕ್ಟೇರ್ ಭತ್ತ ಹಾಗೂ 4,100 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ನಾಟಿ ಕಾರ್ಯ ಆರಂಭಿಸಿರುವ ರೈತರು ಮೂಲ ಗೊಬ್ಬರವಾಗಿ ಸಾರಜನಕ, ರಂಜಕ, ಪೊಟ್ಯಾಷ್ ನಂತಹ ಈ ಮೂರು ಗೊಬ್ಬರಗಳ ಮಿಶ್ರಣವಾಗಿರುವ ಕಾಂಪ್ಲೆಕ್ಸ್ ಗೊಬ್ಬರವನ್ನು ಭೂಮಿಗೆ ಕೊಡುವುದು ಸೂಕ್ತ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

ಭತ್ತ 15:15:15 ಇದ್ದರೆ ಎಕರೆಗೆ 133 ಕೆಜಿ ಅಥವಾ 20:20:0;13 ಇದರೆ 100 ಕೆಜಿ ಮತ್ತು 17 ಕೆಜಿ ಎಂ.ಒ.ಪಿ. ಬೆರೆಸಿ ನೀಡಬೇಕು. ಕಬ್ಬಿಗೆ ಬಿತ್ತನೆ ಸಮಯದಲ್ಲಿ ಎಕರೆಗೆ 10:26:26 ಇದ್ದಲ್ಲಿ 100 ಕೆಜಿ, ಸಿಂಗಲ್ ಸೂಪರ್ ಫಾಸ್ಪೇಟ್ (ಬೂದಿ)-90 ಕೆಜಿ ಹಾಗೂ ಎಂ.ಒ.ಪಿ. -85 ಕೆಜಿ ಅಥವಾ ಡಿ.ಎ.ಪಿ.-50 ಕೆಜಿ, ಸಿಂಗಲ್ ಸೂಪ್ ಫಾಸ್ಟೇಟ್ (ಬೂದಿ) 110 ಕೆಜಿ, ಎಂ.ಒ.ಪಿ 85 ಕೆಜಿ, 20:20:0:13 50.28, - 190 ಜತೆಗೆ 2.20.2.- 85 ರಸಗೊಬ್ಬರಗಳ ಸಂಯೋಜನೆಯೊಂದಿಗೆ ಜಮೀನಿಗೆ ಹಾಕಬೇಕು ಎಂದವರು ತಿಳಿಸಿದ್ದಾರೆ.

ಮುಂದಿನ ಮೇಲು ಗೊಬ್ಬರಕ್ಕೆ ನೇರ ಹರಳು ರೂಪದ ಯೂರಿಯ ಮತ್ತು ಪೊಟ್ಯಾಷ್ ಅಥವಾ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಮಾಡುವುದು ಸೂಕ್ತ. ನ್ಯಾನೋ ಯೂರಿಯಾ ಬಳಕೆ ಪರಿಣಾಮಕಾರಿಯಾಗಿದೆ. ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ನೇರ ಗಿಡಗಳಿಗೆ ಸಿಂಪರಣೆ ಮಾಡುವುದರಿಂದ ಸಾರಜನಕ ಅಂಶವು ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಪೋಲಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ. ರಸಗೊಬ್ಬರ ಬಳಕೆಯಲ್ಲಿ ಸಮತೋಲನ ಕಾಪಾಡುವುದು ಅತ್ಯಂತ ಅಗತ್ಯ. ಸಾರಜನಕ, ರಂಜಕದ ಜತೆಗೆ ಪೊಟ್ಯಾಷ್ ಗೊಬ್ಬರಗಳ ಬಳಕೆ ಅತ್ಯಗತ್ಯ. ಸಾವಯವ ದ್ರವ್ಯಗಳು, ಜೈವಿಕ ಗೊಬ್ಬರಗಳು ಹಾಗೂ ಹಸಿರೆಲೆ ಗೊಬ್ಬರಗಳನ್ನು ಪರ್ಯಾಯ ಸಾರಜನಕ ಮೂಲಗಳಾಗಿ ಬಳಸುವುದರಿಂದ ಯೂರಿಯ

ಗೊಬ್ಬರದ ಬಳಕೆ ಕಡಿಮೆ ಮಾಡುವ ಜತೆಜತೆಗೆ ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ. ಮುಖ್ಯ ಪೋಷಕಾಂಶಗಳ ಜತೆಗೆ ಲಘು ಪೋಷಕಾಂಶಗಳಾದ ಸತ್ತು, ಕಬ್ಬಿಣ, ಮ್ಯಾಂಗನೀಸ್, ಮೆಗ್ನಿಷಿಯಂ, ಸಲ್ಫರ್‌ಯುಕ್ತ ಲಘು ಪೋಷಕಾಂಶಗಳ ಮಿಶ್ರಣವನ್ನು ಪ್ರತಿ ಬೆಳೆಗಳಿಗೆ ಸೇರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net