ಪ್ರಮುಖ ಬೆಳೆಗಳಲ್ಲಿ ಕಂಡು ಬರುವ ರೋಗ, ಕೀಟ ನಿರ್ವಹಣಾ ಕ್ರಮಕ್ಕೆ ಸೂಚನೆ

ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಲ್ಲಿ ಕಂಡು ಬರುವ ರೋಗ, ಕೀಟ ನಿರ್ವಹಣಾ ಕ್ರಮಕ್ಕೆ
Published on
ಯಾದಗಿರಿ : ಜಿಲ್ಲೆಯ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಶೇಂಗಾ, ಜೋಳ, ಕಡಲೆ ಮತ್ತು ಮುಂಗಾರು ಹಂಗಾಮಿನ ತೊಗರಿ ಬೆಳೆಯ ಕ್ಷೇತ್ರಗಳಿಗೆ ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳನ್ನೊಳಗೊಂಡ ತಂಡವು ವರ್ಕನಳ್ಳಿ, ಹಳಗೇರಾ, ಎಲ್ಹೇರಿ, ಆಶಾಪೂರ ಮತ್ತು ಬೂದುರು ಗ್ರಾಮಗಳ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಕೀಟ ಮತ್ತು ರೋಗಗಳ ಸಮೀಕ್ಷೆಯನ್ನು ಕೈಗೊಂಡು ಈ ಕೆಳಕಂಡ ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ರೈತ ಭಾಂದವರು ಅನುಸರಿಸಲು ಯಾದಗಿರಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಞ) ರಾಜಕುಮಾರ ಹೇಳಿದರು.

ಬೆಳೆ ಸಮೀಕ್ಷೆ ತಂಡದಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ವಿಜ್ಞಾನಿಗಳು ಭೇಟಿ ನೀಡಿದ ಅವರು ಮಾತನಾಡಿದರು, ಶೇಂಗಾದಲ್ಲಿ ಬರುವ ಕೀಟ, ರೋಗಗಳು ಸ್ಪೋಡೋಪ್ಟೆರಾ ಕೀಡೆ, ಲದ್ದಿ ಹುಳು ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ.  0.5 ಗ್ರಾಮ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಥವಾ ಲ್ಯಾಂಬ್ಡಾಸೈಯಲೋಥ್ರಿನ್ 5 ಇ.ಸಿ. 0.5 ಎಂ.ಲ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಜಿಗಿ ಹುಳು ನಿರ್ವಹಣೆಗೆ ಥಯೋಮೆಥಾಕ್ಸಾಮ್ 25 ಡಬ್ಲೂ.ಜಿ.  0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲೆ ಚುಕ್ಕೆ ರೋಗ ನಿರ್ವಹಣೆಗೆ ಹೆಕ್ಸಾಕೋನಾಜೋಲ್ 5 ಇ.ಸಿ. 1 ಮಿ. ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತುಕ್ಕು ರೋಗ ನಿರ್ವಹಣೆಗೆ ಮ್ಯಾಂಕೋಜೆಬ್ 75 ಡಬ್ಲೂ.ಸಿ 2 ಗ್ರಾಂ ಅಥವಾ ಟೆಬುಕೋನಾಜೋಲ್ 250 ಇ.ಸಿ. 1.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕತ್ತು ಕೊಳೆ ರೋಗ ನಿರ್ವಹಣೆಗೆ ಕಾರ್ಬನ್‌ಡೈಜೆಮ್ 50 ಡಬ್ಲೂ.ಪಿ 1 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಭಾದಿತ ಗಿಡದ ಸುತ್ತಲೂ ಮಣ್ಣಿಗೆ ಡ್ರಂಚಿAಗ್ ಮಾಡಬೇಕು ಎಂದು ತಿಳಿಸಿದರು.

ಜೋಳದಲ್ಲಿ ಬರುವ ಕೀಟ, ರೋಗಗಳು ಸುಳಿ ನೊಣ ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮೀ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಂಡ ಕೊರೆಯುವ ಹುಳು ಸ್ಪೋಡೋಪ್ಟೆರಾ ಕೀಡೆ ಲದ್ದಿ ಹುಳು ನಿರ್ವಹಣೆಗೆ ಸ್ಪೇನೆಟೋರಾಮ್ 11.7 % ಎಸ್.ಸಿ. 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕುಸುಬೆ ಬೆಳೆಯಲ್ಲಿ ಬರುವ ಕೀಟ, ರೋಗಗಳು ಹೇನು ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮೀ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತೊಗರಿ ಬೆಳೆಯಲ್ಲಿ ಬರುವ ಕೀಟ, ರೋಗಗಳು ಗೊಡ್ಡು ರೋಗ ನಿರ್ವಹಣೆಗೆ ರೋಗ ಬಂದ ಗಿಡಗಳನ್ನು ಕಿತ್ತು ನಾಶಮಾಡಬೇಕು. ನುಶಿ ನಾಶಕಗಳಾದ ಪ್ರೋಪರ್‌ಗೇಟ್ 57 ಇ.ಸಿ. @ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಡಾ.ಜಯಪ್ರಕಾಶ ನಾರಾಯಣ.ಆರ್.ಪಿ, ಯಾದಗಿರಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ತೇಜವರ್ದನ್, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಶಾಸ್ತçಜ್ಞರು ಡಾ.ಶಂಕರಮೂರ್ತಿ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಸಸ್ಯರೋಗ ಶಾಸ್ತçಜ್ಞರು ಡಾ.ರತ್ನಮ್ಮ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಬೇಸಾಯ ಶಾಸ್ತçಜ್ಞರು ಡಾ.ಮಲ್ಲಾರೆಡ್ಡಿ, ಗುರುಮಠಕಲ್ ಕೃ.ಅ.ರೈ.ಸಂ.ಕೇAದ್ರ  ಮಲ್ಲಿಕಾರ್ಜುನ ವಾರದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net