ಕೊಟೆಕ್ಕಲ್ ಆರ್ಯವೈದ್ಯ ಶಾಲೆ ಜತೆಗೆ ಒಡಂಬಡಿಕೆ

h15-ayurveda
Published on

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯದ ಕಾಯಚಿಕಿತ್ಸಾ ವಿಭಾಗದಿಂದ ಯಕೃತ್ ಸಂಬಂಧಿ ವಿಕಾರಗಳು (ಲಿವರ್ ಡಿಸಾರ್ಡರ್) ಕುರಿತು ಸಂಶೋಧಿಸಲು ನಿರ್ಣಯಿಸಲಾಗಿದೆ. ಕೇರಳದ ಕೊಟೆಕ್ಕಲ್ ಆರ್ಯವೈದ್ಯ ಶಾಲಾ ಜತೆಗೆ ಒಂಡಂಬಡಿಕೆಯೂ ಮಾಡಿಕೊಳ್ಳಲಾಗಿದೆ.

ಆಯುರ್ವೆದ ಕಾಲೇಜ್​ನಲ್ಲಿ ಶನಿವಾರ ಏರ್ಪಡಿಸಿದ್ದ ಸಂಶೋಧನಾ ಕುರಿತ ಅಧ್ಯಯನಕ್ಕೆ ಒಪ್ಪಿಗೆ ಸಿಕ್ಕಂತಾಗಿದ್ದು, ಇದು ಒಂದು ವರ್ಷದ ಅವಧಿಯದ್ದಾಗಿದೆ. ಸಭೆಯಲ್ಲಿ ಕೊಟೆಕ್ಕಲ್ ಆರ್ಯ ವೈದ್ಯಶಾಲಾ ಆಡಳಿತ ಮಂಡಳಿ ಟ್ರಸ್ಟಿ ಡಾ.ಪಿ.ಎಂ. ವಾರಿಯರ್, ಆಡಳಿತ ಅಧಿಕಾರಿ ಡಾ. ಕೆ.ಮುರಳಿಧರನ್, ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿ ಚೇರ್ಮನ್ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ ಜೋಶಿ, ಪ್ರಾಚಾರ್ಯ ಡಾ. ಪ್ರಶಾಂತ.ಎ.ಎಸ್., ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net