

ಚನ್ನಪಟ್ಟಣ: ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆ ಜಾರಿಗೆ ಅಗತ್ಯವಿರುವ ಭೂ ಸ್ವಾಧಿನಕ್ಕೆ ಹೆಚ್ಚುವರಿ ಹಣವನ್ನು ಹೊಂದಿಸಲು ನಗರಸಭೆ ಸ್ವತ್ತನ್ನು ಮಾರಾಟ ಮಾಡುವ ಪ್ರಸ್ತಾವನೆಗೆ ನಗರಸಭೆ ಸದಸ್ಯರ ವಿಶೇಷ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ವ್ಯಕ್ತವಾಯಿತು.
ನಗರಸಭೆಯಲ್ಲಿ ಸೋಮವಾರ ವಾಸಿಲ್ ಆಲಿಖಾನ್ ಅಧ್ಯತೆಯಲ್ಲಿ ಹಮ್ಮಿಕೊಂಡಿದ್ದ ಸದಸ್ಯರ ವಿಶೇಷ ಸಭೆಯಲ್ಲಿ, ನಗರದಲ್ಲಿ 2ನೇ ಹಂತದ ಯುಜಿಡಿ ಕಾಮಗಾರಿಗೆ ಅಂದಾಜು 128.74 ಕೋಟಿ ರೂ. ಪರಿಷತ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಸರ್ಕಾರದ ಷರತ್ತಿನಡಿ ಯೋಜನೆಯ ಭೂ ಸ್ವಾಧಿನಕ್ಕೆ ಅಗತ್ಯವಿರುವ ಹೆಚ್ಚುವರಿ 6 ಕೋಟಿ ರೂ. ಭರಿಸಲು ನಗರಸಭೆಯಲ್ಲಿ ಅನುದಾನದ ಕೊರತೆ ಇದ್ದು, ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ 2ನೇ ಹಂತದ ಯುಜಿಡಿ ಯೋಜನೆಯ ಭೂ ಸ್ವಾಧಿನಕ್ಕೆ 6 ಕೋಟಿ ರೂ.ಅನ್ನು ನಗರಸಭೆಯೇ ಭರಿಸಬೇಕಿದೆ ಎಂದು ಪೌರಾಯುಕ್ತ ಮಹೇಂದ್ರ ಸಭೆಗೆ ತಿಳಿಸಿದರು. ಆಗ ಅಧ್ಯ ವಾಸಿಲ್ ಆಲಿಖಾನ್ ಮಾತನಾಡಿ, ಸರ್ಕಾರದ ಷರತ್ತಿನಂತೆ ಒಳಚರಂಡಿ ಯೋಜನೆಗೆ ಹೆಚ್ಚುವರಿ 6 ಕೋಟಿ ರೂ. ಪಾವತಿಸಲು ನಗರಸಭೆಯಲ್ಲಿ ಹಣವಿಲ್ಲ. ಈಗಾಗಲೇ ಒಳಚರಂಡಿ ಯೋಜನೆಗೆ ಕೂಡ್ಲೂರು ಬಳಿ ಎಸ್ಟಿಪಿ ಲ್ಯಾಂಡ್ಗಾಗಿ ಗುರುತಿಸಿರುವ 3 ಎಕೆರೆ 36 ಗುಂಟೆ ಜಮೀನು ಅವೈಾನಿಕವಾಗಿದೆ. ಈ ಜಾಗವನ್ನು ಹರಾಜು ಮಾಡಿ ಬಂದ ಹಣದಿಂದ ಯೋಜನೆಗೆ ಹಣ ಹೊಂದಿಸೋಣ ಎಂದಾಗ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಅಧ್ಯರಿಗೆ ತರಾಟೆ: ಶಾಸಕರು ನಮ್ಮ ವಾರ್ಡ್ಗೆ ಭೇಟಿ ನೀಡಿದಾಗ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಲಿಲ್ಲ ಎಂಬ ವಿಚಾರವಾಗಿ ಮಾಜಿ ಉಪಾಧ್ಯ ಹಾಗೂ 14ನೇ ವಾಡ್ ಸದಸ್ಯ ಶ್ರೀನಿವಾಸಮೂರ್ತಿ ಅವರು ಅಧ್ಯ ವಾಸಿಲ್ ಆಲಿ ಖಾನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೇ ವಿಚಾರವಾಗಿ 15ನೇ ವಾರ್ಡ್ ಸದಸ್ಯೆ ಸುಮಾ ರವೀಶ್ ಸಹ ಧ್ವನಿಗೂಡಿಸಿದರು.
ಶಾಸಕರು ಎಲೇಕೇರಿ ಮೇಲ್ಸೇತುವೆ ವೀಣೆಗೆ ಆಗಮಿಸಿದಾಗ ನಗರಸಭೆ ವ್ಯಾಪ್ತಿಯ 14 ಮತ್ತು 15ನೇ ವಾರ್ಡ್ಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನಗರಸಭೆ ಅಧ್ಯರು ಮತ್ತು ಪೌರಾಯುಕ್ತರು ನಮ್ಮ ಗಮನಕ್ಕೆ ತರಬೇಕಿತ್ತು. ಆದರೆ, ಈ ವಿಚಾರದಲ್ಲಿ ನಮ್ಮನ್ನು ರ್ನಿಲ್ಯ ಮಾಡಿದ್ದು ಏಕೆ? ನಾನು ನಗರಸಭಾ ಸದಸ್ಯನಲ್ಲವೇ? ಎಂದು ಪ್ರಶ್ನಿಸಿದರು. ನಮ್ಮ ವಾರ್ಡ್ನಲ್ಲಿ ಚರಂಡಿ, ರಸ್ತೆ ಸೇರಿ ಹಲವು ಸಮಸ್ಯೆಗಳಿವೆ. ಅವುಗಳ ಬಗ್ಗೆ ಶಾಸಕರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದೇವು. ಅದಕ್ಕೆ ಅವಕಾಶ ಮಾಡಿಕೊಡದೆ ನನ್ನನ್ನು ಕಡೆಗಣಿಸಿದ್ದೀರಿ, ನಿಮ್ಮ ರ್ನಿಲದಿಂದ ಈಗಾಗಲೇ ಉಪಾಧ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂಬುದು ನಿಮ್ಮ ಉದ್ದೇಶವೇ ? ಎಂದು ಅಧ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಈ ರೀತಿಯಾಗದಂತೆ ಕ್ರಮವಹಿಸುವುದಾಗಿ ಅಧ್ಯ ವಾಸಿಲ್ ಆಲಿಖಾನ್ ಸಭೆಗೆ ತಿಳಿಸಿದರು.
24ಕ್ಕೆ ಪ್ರವಾಸ
ವೇಳೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ನಗರಸಭೆಯ ಅಧ್ಯರು, ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ಅಧ್ಯಯನ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಅದರಂತೆ ನಗರಸಭೆಯಿಂದ ಛಂಡಿಗಡಕ್ಕೆ ಅಧ್ಯಯನ ಪ್ರವಾಸಕ್ಕೆ ಪ್ರತಿ ಸದಸ್ಯರಿಗೆ 79,275 ಸಾವಿರ ರೂ. ವೆಚ್ಚವಾಗಲಿದ್ದು, ಈ ಹಣವನ್ನು ನಗರಸಭೆ ಭರಿಸಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರಲ್ಲದೇ ನ.24ರಂದು ಸದಸ್ಯರಿಗೆ ಅನುಕೂಲವಾಗುವಂತೆ ಅಧ್ಯಯನ ಪ್ರವಾಸಕ್ಕೆ ದಿನ ನಿಗದಿಪಡಿಸಲಾಯಿತು.