23 ರಂದು ಅಗ್ರಸೇನಾ ಸಿನಿಮಾ ಬಿಡುಗಡೆ

National Film Awards
Published on

ಕೌಟುಂಬಿಕ ಕಥಾಹಂದರ ಹೊಂದಿರುವ ‘ಅಗ್ರಸೇನಾ’ ಸಿನಿಮಾ ಜೂ.23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕಿ ಮಮತಾ ಜಯರಾಂ ರೆಡ್ಡಿ ತಿಳಿಸಿದರು.

ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಚಲನಚಿತ್ರವಾಗಿರುವ ಕಾರಣ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಚಿತ್ರದಲ್ಲಿ ಐದು ಹಾಡುಗಳಿವೆ. ಖ್ಯಾತ ಗಾಯಕರು ಹಾಡಿದ್ದಾರೆ. ಈ ಚಲನಚಿತ್ರದಲ್ಲಿ ಕತೆಯೇ ಮುಖ್ಯ ಪಾತ್ರ ವಹಿಸುತ್ತದೆ. ಕೌಟುಂಬಿಕ ಸಂಬಂಧ, ಭಾವನೆಗಳು ಹದಗೆಡುತ್ತಿರುವ ಈ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶ ಚಿತ್ರದ್ದಾಗಿದೆ. ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.

ನಾಯಕ ನಟ ಅಮರ್ ವಿರಾಜ್ ಮಾತನಾಡಿ, ಸಿನಿಮಾ ಕೌಟುಂಬಿಕ ಕತೆ ಹೊಂದಿದ್ದು, ಮನೆಯ ಎಲ್ಲರೂ ಕುಳಿತು ನೋಡಬಹುದಾಗಿದೆ. ಸಂಬಂಧಗಳ ಮೌಲ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಸಹ ನಿರ್ದೇಶಕ ವೆಂಕಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net