ಸಿರಿಧಾನ್ಯ, ಸಾವಯುವ ಉತ್ಪನ್ನಗಳು ಬಳಕೆ ಅತೀ ಮುಖ್ಯ
- ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಆಧುನಿಕ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಇತ್ತಾದಿ ರೋಗಗಳು ಮನುಷ್ಯರನ್ನು ಹೆಚ್ಚು ಬಾಧಿಸುತ್ತಿವೆ. ಇವುಗಳಿಂದ ಹೊರಬರಬೇಕಾದರೆ ಸಿರಿಧಾನ್ಯ ಮತ್ತು ಸಾವಯುವ ಉತ್ಪನ್ನಗಳು ಬಳಕೆ ಅತೀ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಶನಿವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ದವಾಗಿದೆ. ಇವು ಆರೋಗ್ಯ ಸಮತೋಲಕ್ಕೆ ಬಹುಮುಖ್ಯವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತು ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮುಡಿಸುವ ದಿಸೆಯಲ್ಲಿ ಈ ರೀತಿಯ ಸ್ಪರ್ಧೇಗಳು ಬಹಳಷ್ಟು ಉಪಯೋಗಕಾರಿಯಾಗಿದ್ದು, ಸರರ್ಕಾರವು ಸಿರಿಧಾನ್ಯ ಮತ್ತು ಸಾವಯವ ಬೆಳೆಗಾರರಿಗೆ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ವಿಶೇಷ ಭೂ ಸ್ವಾಧಿನ ಅಧಿಕಾರಿ ರಾಜಶ್ರೀ ಜೈನಾಪೂರ ಮಾತನಾಡಿ, ಪಾರಂಪರಿಕ ಆಹಾರ ಪದ್ಧತಿ ನಶಿಸಿ ಹೋಗುತ್ತಿದ್ದು ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟೀಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನವನ್ನು ಮುಂದಿನ ಪೀಳಿಗೆಗೆ ತಿಳಿಪಡಿಸಿ ಸಂಪ್ರಾದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು ಅತ್ಯಗತ್ಯವಾಗಿದೆ. ಜನರು ದಿನನಿತ್ಯದ ಜೀವನದಲ್ಲಿ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಆರೋಗ್ಯ ಲಾಭದ ಜೊತೆಗೆ ರೈತರನ್ನು ಸಹ ಉತ್ಸಾಹಿಸಿದಂತಾಗುತ್ತದೆ ಎಂದು ತಿಳಿಸಿದರು.
ಬೆಳಗಾವಿ ವಿಭಾಗದ ಉಪ ಕೃಷಿ ನಿರ್ದೇಶಕ ಎಸ್.ಬಿ.ಕೊಂಗವಾಡ, ಚಿಕ್ಕೋಡಿ ವಿಭಾಗದ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ, ಎಲ್.ಐ. ರೂಡಗಿ, ಡಾ.ದತ್ತಾ ಮೇತ್ರೆ, ಮುಖ್ಯಸ್ಥರು, ವಜ್ರೇಶ್ವರಿ ಕುಲಕರ್ಣಿ, ಮಂಗಲಾ ಬಿರಾದಾರ ಇತರರಿದ್ದರು.
............
ಬಾಕ್ಸ
80ಜನ ಸ್ಪರ್ಧಿಗಳು ಭಾಗಿ
ಪಾಕ ಸ್ಪರ್ಧೇಯಲ್ಲಿ ಜಿಲ್ಲೆಯಾದ್ಯಂತ 80 ಜನ ಸ್ಪರ್ಧೀಗಳು ಭಾಗವಹಿಸಿದ್ದರು. ಸಿರಿಧಾನ್ಯ ಖಾರ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ರೂಪಾಂಜಲಿ ಭೋಸಲೆ, ದ್ವಿತೀಯ ಸ್ಥಾನ ವೀಣಾ ಗಜರೆ ಮತ್ತು ತೃತೀಯ ಸ್ಥಾನ ಭಾವನಾ ಕಿತ್ತೂರಕರ ಆಯ್ಕೆಯಾದರು.ಸಿರಿಧಾನ್ಯ ಸಹಿ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಅನಿತಾ ಜೋಡಟ್ಟಿ, ದ್ವಿತೀಯ ಸ್ಥಾನ ವೈಶ್ಣವಿ ಹೆಬಸೂರ ಮತ್ತು ತೃತೀಯ ಸ್ಥಾನ ಪೂಜಾ ಪಾಟೀಲ ಆಯ್ಕೆಯಾದರು ಮತ್ತು ಮರೆತು ಹೋದ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಶೋಭಾ ದೇಯನ್ನವರ, ದ್ವಿತೀಯ ಸ್ಥಾನ ಸುನಂದಾ ಬನಹಟ್ಟಿ ಮತ್ತು ತೃತೀಯ ಸ್ಥಾನ ಲತಾ ಪರವಿನಾಯ್ಕರ ಆಯ್ಕೆಯಾದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರು 2025 ಜನೇವರಿ 25 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಸಿರಿಧಾನ್ಯ, ಸಾವಯುವ ಉತ್ಪನ್ನಗಳು ಬಳಕೆ ಅತೀ ಮುಖ್ಯ
- ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಆಧುನಿಕ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಇತ್ತಾದಿ ರೋಗಗಳು ಮನುಷ್ಯರನ್ನು ಹೆಚ್ಚು ಬಾಧಿಸುತ್ತಿವೆ. ಇವುಗಳಿಂದ ಹೊರಬರಬೇಕಾದರೆ ಸಿರಿಧಾನ್ಯ ಮತ್ತು ಸಾವಯುವ ಉತ್ಪನ್ನಗಳು ಬಳಕೆ ಅತೀ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಶನಿವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ದವಾಗಿದೆ. ಇವು ಆರೋಗ್ಯ ಸಮತೋಲಕ್ಕೆ ಬಹುಮುಖ್ಯವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತು ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮುಡಿಸುವ ದಿಸೆಯಲ್ಲಿ ಈ ರೀತಿಯ ಸ್ಪರ್ಧೇಗಳು ಬಹಳಷ್ಟು ಉಪಯೋಗಕಾರಿಯಾಗಿದ್ದು, ಸರರ್ಕಾರವು ಸಿರಿಧಾನ್ಯ ಮತ್ತು ಸಾವಯವ ಬೆಳೆಗಾರರಿಗೆ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ವಿಶೇಷ ಭೂ ಸ್ವಾಧಿನ ಅಧಿಕಾರಿ ರಾಜಶ್ರೀ ಜೈನಾಪೂರ ಮಾತನಾಡಿ, ಪಾರಂಪರಿಕ ಆಹಾರ ಪದ್ಧತಿ ನಶಿಸಿ ಹೋಗುತ್ತಿದ್ದು ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟೀಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನವನ್ನು ಮುಂದಿನ ಪೀಳಿಗೆಗೆ ತಿಳಿಪಡಿಸಿ ಸಂಪ್ರಾದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು ಅತ್ಯಗತ್ಯವಾಗಿದೆ. ಜನರು ದಿನನಿತ್ಯದ ಜೀವನದಲ್ಲಿ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಆರೋಗ್ಯ ಲಾಭದ ಜೊತೆಗೆ ರೈತರನ್ನು ಸಹ ಉತ್ಸಾಹಿಸಿದಂತಾಗುತ್ತದೆ ಎಂದು ತಿಳಿಸಿದರು.
ಬೆಳಗಾವಿ ವಿಭಾಗದ ಉಪ ಕೃಷಿ ನಿರ್ದೇಶಕ ಎಸ್.ಬಿ.ಕೊಂಗವಾಡ, ಚಿಕ್ಕೋಡಿ ವಿಭಾಗದ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ, ಎಲ್.ಐ. ರೂಡಗಿ, ಡಾ.ದತ್ತಾ ಮೇತ್ರೆ, ಮುಖ್ಯಸ್ಥರು, ವಜ್ರೇಶ್ವರಿ ಕುಲಕರ್ಣಿ, ಮಂಗಲಾ ಬಿರಾದಾರ ಇತರರಿದ್ದರು.
............
ಬಾಕ್ಸ
80ಜನ ಸ್ಪರ್ಧಿಗಳು ಭಾಗಿ
ಪಾಕ ಸ್ಪರ್ಧೇಯಲ್ಲಿ ಜಿಲ್ಲೆಯಾದ್ಯಂತ 80 ಜನ ಸ್ಪರ್ಧೀಗಳು ಭಾಗವಹಿಸಿದ್ದರು. ಸಿರಿಧಾನ್ಯ ಖಾರ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ರೂಪಾಂಜಲಿ ಭೋಸಲೆ, ದ್ವಿತೀಯ ಸ್ಥಾನ ವೀಣಾ ಗಜರೆ ಮತ್ತು ತೃತೀಯ ಸ್ಥಾನ ಭಾವನಾ ಕಿತ್ತೂರಕರ ಆಯ್ಕೆಯಾದರು.ಸಿರಿಧಾನ್ಯ ಸಹಿ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಅನಿತಾ ಜೋಡಟ್ಟಿ, ದ್ವಿತೀಯ ಸ್ಥಾನ ವೈಶ್ಣವಿ ಹೆಬಸೂರ ಮತ್ತು ತೃತೀಯ ಸ್ಥಾನ ಪೂಜಾ ಪಾಟೀಲ ಆಯ್ಕೆಯಾದರು ಮತ್ತು ಮರೆತು ಹೋದ ಖಾದ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಶೋಭಾ ದೇಯನ್ನವರ, ದ್ವಿತೀಯ ಸ್ಥಾನ ಸುನಂದಾ ಬನಹಟ್ಟಿ ಮತ್ತು ತೃತೀಯ ಸ್ಥಾನ ಲತಾ ಪರವಿನಾಯ್ಕರ ಆಯ್ಕೆಯಾದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರು 2025 ಜನೇವರಿ 25 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.