ಅಗ್ನಿಪಥ 4 ವರ್ಷದ ಕೌಶಲಾಧರಿತ ತರಬೇತಿ: ಸಚಿವ ಎ.ನಾರಾಯಣಸ್ವಾಮಿ

narayanaswami
Published on

ಚಿತ್ರದುರ್ಗ: ಅಗ್ನಿಪಥ ಯೋಜನೆ ಜಾಬ್ ಸೆಕ್ಯೂರಿಟಿಯ ಉದ್ಯೋಗವಲ್ಲ. ಅದು 4 ವರ್ಷ ರಕ್ಷಣಾ ಇಲಾಖೆಯಲ್ಲಿ ಕೌಶಲಾಧರಿತ ತರಬೇತಿ ನೀಡುವುದಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜತೆ ಮಾತನಾಡಿ, 17-21 ವರ್ಷದವರೆಗೆ ಯುವಜನರಿಗೆ ಸೇನೆಯ ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು. ಇಲ್ಲಿ ಅವಧಿ ಪೂರ್ಣಗೊಳಿಸಿದವರಿಗೆ ಸೇನೆಯಲ್ಲಿ ಶೇ.25 ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದ್ಯೋಗದಲ್ಲಿ ವಿಶೇಷ ಮೀಸಲು ಅವಕಾಶ ಸಿಗಲಿದೆ ಎಂದ ಅವರು, ಯೋಜನೆ ಕುರಿತ ಗೊಂದಲಗಳನ್ನು ಕೇಂದ್ರ ನಿವಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವಧಿ ಪೂರ್ವ ವಿಧಾನಸಭೆ ಚುನಾವಣೆ ಇಲ್ಲ

ಕರ್ನಾಟಕದಲ್ಲ್ಲಿ ಅವಧಿ ಮುನ್ನ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸೇವಕನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಎ.ನಾರಾಯಣಸ್ವಾಮಿ ಹೇಳಿದರು.

ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಅವರು ಬರುತ್ತಿದ್ದಾರೆ. ಪ್ರಧಾನಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರ್ನಾಟಕಕ್ಕೆ ಬರುತ್ತಿರುವುದು ಖಂಡಿತಾ ಚುನಾವಣೆ ದೃಷ್ಟಿಯಿಂದ ಅಲ್ಲ ಎಂದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net