ಅಗ್ನಿ ಅವಘಡ, ಹೊತ್ತಿ ಉರಿದ ಕಾರು

18GPB-1-Web
ಘಟಪ್ರಭಾ ಬಳಿ ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ.
Published on

ಘಟಪ್ರಭಾ: ಪಟ್ಟಣದ ಹೊರವಲಯದ ಗೋಕಾಕ ರಸ್ತೆಯ ಕೆನಾಲ್ ಕಾಲುವೆ ಬಳಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಕಾರು ಹೊತ್ತಿ ಉರಿದ ಘಟನೆ ಭಾನುವಾರ ಸಂಭವಿಸಿದೆ. ಹುಕ್ಕೇರಿ ತಾಲೂಕಿನ ಯಾದಗೂಡದಿಂದ ಪತ್ನಿಯನ್ನು ಕರೆತರಲು ಚಾಲಕ ಗೋಕಾಕ ತಾಲೂಕಿನ ಲೋಳಸೂರ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾನೆ. ಕ್ಷಣಾರ್ಧದಲ್ಲೇ ಬೆಂಕಿ ವಾಹನದ ತುಂಬೆಲ್ಲ ವ್ಯಾಪಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ವಾಹನ ಸುಟ್ಟು ಕರಕಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದ್ದು, ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟಪ್ರಭಾ ನದಿ ದಡದಲ್ಲಿ ಅಪರಿಚಿತ ಶವ ಪತ್ತೆ

ಘಟಪ್ರಭಾ ಲೋಳಸೂರ ಸರಹದ್ದಿನಲ್ಲಿರುವ ಘಟಪ್ರಭಾ ನದಿ ದಡದಲ್ಲಿ ಭಾನುವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಎರಡ್ಮೂರು ದಿನಗಳ ಹಿಂದೆ ನದಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ವ್ಯಕ್ತಿಯ ಮೈ ಮೇಲೆ ಬಿಳಿ ಬಣ್ಣದ ಉದ್ದ ತೋಳಿನ ಅಂಗಿ, ಕಪ್ಪು ಬನಿಯನ್ ಹಾಗೂ ಕಪ್ಪು ಬಣ್ಣದ ್ಯಾಂಟ್ ಇದೆ. ತಲೆಯಲ್ಲಿ ಕಪ್ಪು ಮತ್ತು ಬಿಳಿ ಕೂದಲಿರುವ ವ್ಯಕ್ತಿಗೆ ಅಂದಾಜು 50 ರಿಂದ 55 ವಯಸ್ಸಿರಬಹುದು. ಮಾಹಿತಿ ಇದ್ದರೆ ಘಟಪ್ರಭಾ ಪೊಲೀಸ್ ಠಾಣೆ ದೂ.ಸಂ.08332-286233 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net