ರೈತ ಸೇನಾ ಕರ್ನಾಟಕದಿಂದ ಧರಣಿ

16 Dwd 6
Published on

ಧಾರವಾಡ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಜಾರಿ ಹಾಗೂ ನೀರಾವರಿ ಇಲಾಖೆಯಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ವತಿಯಿಂದ ನಗರದ ನೀರಾವರಿ ಇಲಾಖೆ ಕಚೇರಿ ಎದುರು ಬುಧವಾರ ನಿರಂತರ ಧರಣಿ ಆರಂಭಿಸಲಾಯಿತು.
ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಕಳಸಾ- ಬಂಡೂರಿಗಾಗಿ ನಡೆದ ಹೋರಾಟದಲ್ಲಿ ೧೦ ಜನ ರೈತರ ಮೃತಪಟ್ಟಿದ್ದಾರೆ. ೭ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಯೋಜನೆ ಜಾರಿಗೆ ಅರಣ್ಯ ಇಲಾಖೆ ಪರವಾನಗಿ ಪಡೆಯುವುದು ಮತ್ತು ಅಗತ್ಯ ಮಾಹಿತಿ ಕ್ರೋಢೀಕರಣ ಮಾಡಿ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಅಗತ್ಯ ಮಾಹಿತಿ ಕಳುಹಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಚುನಾವಣಾ ಹೊಸ್ತಿಲಲ್ಲಿ ಅರಣ್ಯ, ಪರಿಸರ, ಟೈಗರ್ ಕಾರಿಡಾರ್ ಮುಂತಾದ ಇಲಾಖೆಗಳಿಂದ ಪರವಾನಗಿ ಪಡೆಯದೆ ಕಾನೂನುಬಾಹಿರವಾಗಿ ಟೆಂಡರ್ ಕರೆದಿದೆ. ಅಂಥ ಅಽಕಾರಿಗಳನ್ನು ಅಮಾನತು ಮಾಡಬೇಕು. ನೀರಾವರಿ ನಿಗಮ ೨೨ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ಮಾಡದೆ ಖೊಟ್ಟಿ ಬಿಲ್ ಪಾಸ್ ಮಾಡಲಾಗಿದ್ದು, ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾಽಕಾರಿ ಕಚೇರಿಯ ಶಿರಸ್ತೇದಾರ ಶ್ರೀಧರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಶರಣಗೌಡ ಪಾಟೀಲ, ನಂದೀಶ ಮಠದ, ಮಲ್ಲಣ್ಣ ಅಲೇಕರ, ಗುರು ರಾಯನಗೌಡರ, ಹನುಮಂತಪ್ಪ ಚಲವಾದಿ, ನಾಗರಾಜ ಜಾಡರ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net