ಅಗರಿಯಲ್ಲಿ ಹಬ್ಬಗಳ ಉತ್ಸವದ ಬಂಪರ್ ಡ್ರಾ

agari
ಗರಿ ಹಬ್ಬಹಬ್ಬಗಳ ಉತ್ಸವ 2023 ಇದರ ಬಂಪರ್ ಡ್ರಾ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀ ಕಮಲಾದೇವಿ ಆಸ್ರಣ್ಣ ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್, ವಾಯ್ಸ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ, ಅಗರಿ ಎಂಟರ್‌ಪ್ರೈಸರ್ಸ್‌ನ ಮಾಲೀಕರಾದ ಅಗರಿ ರಾಘವೇಂದ್ರ ರಾವ್ ಮುಂತಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಅಗರಿ ಹಬ್ಬಹಬ್ಬಗಳ ಉತ್ಸವ 2023ರ ಬಂಪರ್ ಡ್ರಾ ಮೂಡುಬಿದಿರೆ ಶಾಖೆಯಲ್ಲಿ ನೆರವೇರಿತು. ಪ್ರತೀ 3000 ರೂ.ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು, ವಿಜೇತ ಗ್ರಾಹಕರು ಗೃಹೋಪಯೋಗಿ ಉತ್ಪನ್ನಗಳನ್ನು ಬಹುಮಾನವಾಗಿ ಪಡೆಯಬಹುದು. ಅಗರಿ ಹಬ್ಬಹಬ್ಬಗಳ ಉತ್ಸವದ 2ನೇ ಹಂತದ ಗಿಫ್ಟ್ ಕೂಪನ್ ಉದ್ಘಾಟನೆ ಮತ್ತು ಪ್ರಥಮ ಹಂತದ ಬಂಪರ್ ಡ್ರಾ ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶ್ರೀ ಕಮಲಾದೇವಿ ಆಸ್ರಣ್ಣ ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್, ವಾಯ್ಸಾ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ ಇದ್ದರು. ಅಮಿತ್ ಡಿಸಿಲ್ವ ಪಾಲಡ್ಕ, ಪ್ರಸಾದ್ ಕುಮಾರ್, ಸಂದೀಪ್ ಹೆಗ್ಡೆ, ಮೋಬಿನ್, ಅಬ್ದುಲ್ ಶುಕೂರ್ ಅಸ್ಸಾದಿ ಶುಭ ಹಾರೈಸಿದರು.

ವಾಯ್ಸಾ ಆಫ್ ಆರಾಧನಾ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು. ಅಗರಿ ಎಂಟರ್‌ಪ್ರೈಸರ್ಸ್ ಮಾಲೀಕರಾದ ಅಗರಿ ರಾಘವೇಂದ್ರ ರಾವ್ ಮಾತನಾಡಿ ‘ ಹಬ್ಬಹಬ್ಬಗಳ ಉತ್ಸವ ಪ್ರತೀ ನೂರು ದಿನಕ್ಕೆ ನೂರು ಮಂದಿ ಅದೃಷ್ಟವಂತ ಗ್ರಾಹಕರಿಗೆ ಬಹುಮಾನ ನೀಡುವ ವಿಶಿಷ್ಟ ಯೋಜನೆಯಾಗಿದೆ. ಸಂಸ್ಥೆಯ ಎಲ್ಲ 6 ಶಾಖೆಗಳಲ್ಲಿ ಈ ಸೌಲಭ್ಯ ಇದೆ ಎಂದರು.

ಅಗರಿ ಅಭಿನೀತ್ ರಾವ್, ಅಗರಿ ವಾದಿರಾಜ್ ರಾವ್, ಮೂಡುಬಿದಿರೆ ಶಾಖೆಯ ಮ್ಯಾನೇಜರ್ ಸುನಿಲ್ ಉಪಸ್ಥಿತರಿದ್ದರು.ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕಳೆದ ಡ್ರಾ ಕಾರ್ಯಕ್ರಮದ ವಿಜೇತರಿಗೆ ಅಗರಿ ರಾಘವೇಂದ್ರ ರಾವ್ ಬಹುಮಾನ ವಿತರಿಸಿದರು.

ವಹಿದಾ ಅವರಿಗೆ ಐರನ್ ಟೇಬಲ್, ಲವಿನಾ ಅವರಿಗೆ ಬಿರಿಯಾನಿ ಪಾಟ್, ಯುವರಾಜ ಅವರಿಗೆ ಐರನ್ ಬಾಕ್ಸ್, ಪ್ರಭಾಚಂದ್ರ ಅವರಿಗೆ ಡಿನ್ನರ್ ಸೆಟ್, ಆಸ್ಮಿತಾ ಅವರಿಗೆ ಕೆಟಲ್, ಅರುಣ್ ಪಾಯಸ್ ಅವರಿಗೆ ಮಲ್ಟಿ ಕುಕ್ಕರ್, ದೇವದಾಸ್ ಪೂಜಾರಿ ಅವರಿಗೆ ಮೋಪ್, ಸುಪ್ರೀತಾ ಅವರಿಗೆ ಇಡ್ಲಿ ಕುಕ್ಕರ್, ಪದ್ಮಾ ಅವರಿಗೆ ನಾನ್‌ಸ್ಟಿಕ್ ಸೆಟ್ ಬಹುಮಾನವಾಗಿ ನೀಡಲಾಯಿತು. ಅಗರಿ ವಾದಿರಾಜ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net