ಗ್ರಾಹಕರಿಗೆ ಗುಣಮಟ್ಟದ ಸೇವೆ : ಅಶ್ರಫ್ ಮರೋಡಿ ಹೇಳಿಕೆ

New Project (19)
Published on

ಮೂಡುಬಿದಿರೆ: ಅಗರಿ ಎಂಟರ್‌ಪ್ರೈಸಸ್ ವತಿಯಿಂದ ಆಯೋಜಿಸಲಾದ ಹಬ್ಬ ಹಬ್ಬಗಳ ಉತ್ಸವ ಪ್ರತಿದಿನ ಒಂದು ಬಹುಮಾನ, 100 ದಿನ 100 ಬಹುಮಾನ ಕಾರ್ಯಕ್ರಮದ 7ನೇ ಹಂತದ 6ನೇ ಡ್ರಾ ಹಾಗೂ ಹಿಂದಿನ ವಿಚೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಸೋಮವಾರ ಮೂಡುಬಿದಿರೆ ಗಾಂಧಿ ನಗರದ ಶಾಖೆಯಲ್ಲಿ ನಡೆಯಿತು.

ಸಮಾಜ ಸೇವಕ ಅಶ್ರಫ್ ಮರೋಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಗರಿ ಸಂಸ್ಥೆ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿದೆ. ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಅಗರಿ ಮಾಲೀಕ ರಾಘವೇಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆ ಸದಾ ಗ್ರಾಹಕರೊಂದಿಗಿರುವ ಸಂಸ್ಥೆ. ಲಕ್ಕಿ ಡ್ರಾ ಕಾರ್ಯಕ್ರಮಗಳು ಕೇವಲ ವಿಜೇತರನ್ನು ಗುರುತಿಸುವುದು ಮಾತ್ರವಲ್ಲ. ಗ್ರಾಹಕರು ಹಾಗೂ ಸಂಸ್ಥೆಯ ನಡುವಿನ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡುತ್ತಿದೆ. ಕಳೆದ ಎರಡೂವರೆ ದಶಕಗಳಿಂದ ನಮ್ಮ ಸಂಸ್ಥೆ ಗ್ರಾಹಕಸ್ನೇಹಿ ಸೇವೆ ನೀಡುತ್ತಿದೆ ಎಂದರು.

ಪತ್ರಕರ್ತ ಜಗದೀಶ್ ಪೂಜಾರಿ, ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯಲ್ಲನ ಗೌಡ, ಆಳ್ವಾಸ್ ಕಾಲೇಜು ಉಪನ್ಯಾಸಕ ಶಿವಪ್ರಸಾದ್ ಎಂ., ಉದ್ಯಮಿ ಸುಶಾಂತ್ ಕರ್ಕೇರ, ವಸಂತ್ ಎಸ್.ಕೋಟ್ಯಾನ್, ಶೇಖರ್ ಸಾಲ್ಯಾನ್ ಎಡಪದವು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಎನ್.ನಿತೇಶ್ ಕೋಟ್ಯಾನ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಚಂದ್ರಶೇಖರ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಡ್ರಾ ವಿಜೇತರಾದ ಚಂದ್ರಶೇಖರ್, ಡಾ.ಸುರೇಶ್, ಸುಶ್ಮಿತಾ, ಅಶೋಕ್ ಶೆಟ್ಟಿ, ಹೇಮಚಂದ್ರ ಉಪಸ್ಥಿತರಿದ್ದರು.

ಶಾಖೆ ಮ್ಯಾನೇಜರ್ ಸುಭಾಷ್ ಹಾಗೂ ಸಿಬ್ಬಂದಿ ಸಹಕರಿಸಿದರು. ಮೂಡುಬಿದಿರೆ ಶಾಖೆಯ ಪ್ರಬಂಧಕ ಅಗರಿ ವಾದಿರಾಜ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net