ಅಗರ ಒಂದು ದೈವಿಕ ಗ್ರಾಮ

Oplus_131072
ಯಳಂದೂರು ತಾಲೂಕಿನ ಅಗರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸೋಮೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.
Published on

ಯಳಂದೂರು: ತಾಲೂಕಿನ ಅಗರ ಗ್ರಾಮ ಅನೇಕ ದೇಗುಲಗಳ ಗ್ರಾಮವಾಗಿದೆ. ಇಲ್ಲಿ ಐತಿಹಾಸಿಕ ಹಾಗೂ ಅನೇಕ ಪೌರಾಣಿಕ ದೇಗುಲಗಳಿವೆ. ಇದೊಂದು ದೈವಿಕ ಗ್ರಾಮವಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಗುರುವಾರ ತಾಲೂಕಿನ ಶ್ರೀ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಸಂಪ್ರೋಕ್ಷಣೆ, ವಿಮಾನಗೋಪುರ ಕಲಶಾರೋಹಣ ಹಾಗೂ ಅಷ್ಟಬಂಧ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗರ ಗ್ರಾಮದಲ್ಲಿ ಅನೇಕ ಪ್ರತಿಭಾವಂತರಿದ್ದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿನ ಸಂಸ ಅವರು ದೇಶ ಕಂಡ ಶ್ರೇಷ್ಠ ನಾಟಕಕಾರಾಗಿದ್ದರು. ಇವರು ರಚಿಸಿದ ನಾಟಕಗಳು ಇಂದಿಗೂ ಪ್ರಸಿದ್ಧಿ ಪಡೆದಿವೆ. ಇಂತಹ ಅನೇಕ ಪ್ರತಿಭಾವಂತರು ಇಲ್ಲಿರುವುದಕ್ಕೆ ದೈವಿಕ ಅನುಗ್ರಹವೂ ಕಾರಣವಾಗಿದೆ. ಇಂತಹ ಗ್ರಾಮದಲ್ಲಿ ಪುರಾತನ ದೇಗುಲವಾದ ಸೋಮೇಶ್ವರ ದೇಗುಲದ ಜೀರ್ಣೋದ್ಧಾರ ಮಾಡಿ ಇದನ್ನು ಜೋಪಾನ ಮಾಡುತ್ತಿರುವ ಕೆಲಸಕ್ಕೆ ಇಲ್ಲಿನ ವಾಸಿಗಳು ಕೈ ಜೋಡಿಸಿರುವುದು ಸಂತಸದಸ ಸಂಗತಿಯಾಗಿದೆ ಎಂದರು.

ಸಾಲೂಕು ಬೃಹನ್ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ಅಗರ ಹಾಗೂ ಮಲೆಮಹದೇಶ್ವರ ದೇಗುಲಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಪಂಚಲಿಂಗಗಳ ದೇಗುಲಗಳಿವೆ. ಮುಂದಿನ ದಿನಗಳಲ್ಲಿ ಇಲ್ಲಿ ಪಂಚಲಿಂಗ ದರ್ಶನವನ್ನು ಮಾಡುವ ಎಲ್ಲ ಅವಕಾಶಗಳೂ ಇವೆ ಎಂದರು.

ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ದೇವರ ಮೂರ್ತಿಯ ಮೆರವಣಿಗೆ ನಡೆಯಿತು. ವೇದ ಪಾರಾಯಣ, ಕಲಸ ಪ್ರತಿಷ್ಠಾಪನೆ, ವಿವಿಧ ಹೋಮ ಹವನ ಸೇರಿದಂತೆ ಅನೇಕ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮೈಸೂರು ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ ಅವರು ಅಗರ ಗ್ರಾಮದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಅಗರ ಕಲ್ಲುಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಕಾರಾಪುರ ಮಠದ ಶ್ರೀ ಬಸವರಾಜ ಸ್ವಾಮಿ ಒಡೆಯರ್, ಮುಡಿಗುಂಡ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ಗೌಡಹಳ್ಳಿ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ, ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಕುಂತೂರು ಮಠದ ಶ್ರೀ ಶಿವಪ್ರಭು ಸ್ವಾಮೀಜಿ, ಚಿಲಕವಾಗಿ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಶ್ರೀ ಬಾಲಷಡಕ್ಷರ ಸ್ವಾಮೀಜಿ, ಶ್ರೀ ಬಸವಣ್ಣ ಸ್ವಾಮೀಜಿ, ಶ್ರೀ ಮಲ್ಲಿನಾಥಶಿವಾಚಾರ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಬಸಪ್ಪ ಸ್ವಾಮೀಜಿ, ಶ್ರೀ ಲಿಂಗರಾಜ ಸ್ವಾಮೀಜಿ, ಶ್ರೀ ನಂಜುಂಡ ಸ್ವಾಮೀಜಿ ಸೇರಿದಂತೆ ಅಗರ ಗ್ರಾಮದ ವೀರಶೈವ-ಲಿಂಗಾಯತ ಸಮಾಜದ ಮುಖಂಡರು, ಗೌಡರು, ಶೆಟ್ಟರು, ಯಜಮಾನರು ಹಾಗೂ ಅಗರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net