ಮಂಗಳೂರಿನಲ್ಲಿ ಮತ್ತೆ 4 ಕರೋನಾ ಪಾಸಿಟಿವ್

corona
Published on

ಮಂಗಳೂರು: ಮಂಗಳೂರಿನಲ್ಲಿ ಮಂಗಳವಾರ ಮತ್ತೆ ನಾಲ್ಕು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಐದಕ್ಕೇರಿದೆ. ಈ ನಾಲ್ವರು ಕೇರಳದವರಾಗಿದ್ದು, ಮಾ.19 ಮತ್ತು 20ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ವಿದೇಶದಿಂದ ಆಗಮಿಸಿದ್ದರು. ಇವರಲ್ಲಿ ಮೂರು ಮಂದಿ ಮೊದಲ ಪ್ರಕರಣದ ವ್ಯಕ್ತಿಯ ಜತೆಗೆ ವಿಮಾನದಲ್ಲಿ ಬಂದವರು. ಮೂರು ಮಂದಿ ವೆನ್ಲಾಕ್‌ನಲ್ಲಿ ಮತ್ತು ಓರ್ವ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾ.22ರಂದು ಭಟ್ಕಳ ಮೂಲದ ವ್ಯಕ್ತಿಯೊಬ್ಬನಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ದ.ಕ ಜಿಲ್ಲೆಯ ಮೊದಲ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net