ಸಂಧಾನದ ನಾಟಕವಿಲ್ಲ, ಸ್ಪರ್ಧೆ ಖಚಿತ ಎಂದ ನಿತೀನ್ ಗುತ್ತೇದಾರ

FB_IMG_1681284128892
Published on

ಕಲಬುರಗಿ: ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಸಹೋದರ ಮಾಲೀಕಯ್ಯ ವಿರುದ್ಧ ತೊಡೆ ತಟ್ಟುವುದು ಖಚಿತ ಎಂದು ನಿತೀನ್ ಗುತ್ತೇದಾರ್ ಹೇಳಿದರು.
ಕಲಬುರಗಿ ಏರ್‌ಪೋರ್ಟ್‌‌ನಲ್ಲಿ ಹೇಳಿಕೆ ನೀಡಿರುವ ನಿತೀನ್ ಗುತ್ತೇದಾರ್, ಅಫಜಲಪುರ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಸಹೋದರರಾಗಿದ್ದು, ಟಿಕೆಟ್ ಸಿಗುತ್ತೆ ಅಂತಾ ಭರವಸೆ ಇತ್ತು.. ಆದರೆ ಅಂತಿಮವಾಗಿ
ಟಿಕೆಟ್ ಕೈತಪ್ಪಿದ್ದರಿಂದ ಬೇಸರವಿಲ್ಲ. ಅಂದುಕೊಂಡಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಸಂಧಾನದ ನಾಟಕ ಎಲ್ಲಾ ಇವಾಗ ನಡೆಯೋದಿಲ್ಲ. ಈ ಹಿಂದೆ ಹೇಳಿದಂತೆ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಲಿದ್ದೇನೆ. ಪಕ್ಷ ಕೈಕೊಟ್ಟಿರಬಹುದು. ಆದರೆ ನನ್ನ ಅಫಜಲಪುರ ಮತಕ್ಷೇತ್ರದ ಜನ ಕೈಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರದ ಜನ ಹಿರಿಯರು ಮುಖಂಡರು ನನಗೆ ಕಾಲ್ ಮಾಡಿ ಧೈರ್ಯ ತುಂಬಿ ಬೆಂಬಲ ಸೂಚಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net