

ತುಮಕೂರು: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಿ, ಹೊಸ ಸರ್ಕಾರ ರಚನೆ ಆಗಲಿದೆ ಎಂದು ಬಿಜೆಪಿ ಶಾಸಕ ಬಿ.ಸುರೇಶಗೌಡ ಸ್ಫೋಟಕ ಹೇಳಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಸೋಲಿನಿಂದಲೇ ಹೊಸ ರಾಜಕಾರಣ ಆರಂಭವಾಗುತ್ತೆ. ಈಗಾಗಲೇ ಸಚಿವ ಸತೀಶ್ ಜಾರಕಿಹೋಳಿ ಸ್ಪಷವಾಗಿ ನಮ್ಮಲ್ಲಿ ಬಂಡಾಯ ಇದೆ, ಭಿನ್ನಾಭಿಪ್ರಾಯ ಇದೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಮೂರು ಗುಂಪು ಸೃಷ್ಟಿಯಾಗಿದೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕೈ ಮೂರು ಗುಂಪುಗಳಲ್ಲಿ ಒಂದು ಗುಂಪು ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಸೋಲಿಸಲು ಮುಂದಾಗಿದೆ. ಸತೀಶ್ ಜಾರಕಿಹೊಳಿ, ಪರಮೇಶ್ವರ, ಸಿದ್ದರಾಮಯ್ಯ ಎಲ್ಲರು ಸೇರಿಕೊಂಡು ಡಿ.ಕೆ.ಸುರೇಶ್‌ರನ್ನು ಸೋಲಿಸಲಿದ್ದು ಅಲ್ಲಿಂದಲೇ ಬಂಡಾಯ ಭುಗಿಲೇಳಲಿದೆ. ಈ ಸೋಲಿನಿಂದ ಪ್ರಾರಂಭವಾಗುವ ರಾಜಕಾರಣ ಕೊನೆಯ 6 ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಸರ್ಕಾರ ಪತನವಾಗಿ, ಹೊಸ ಸರ್ಕಾರ ರಚನೆ ಆಗುತ್ತೆ. ಎಲ್ಲರು ಕಾದುನೋಡಿ ಎಂದರು.