ಜನರ ನಿದ್ದೆಗೆಡಿಸಿದ ಚಿರತೆ ಸೆರೆ ಪ್ರಮಾಣ ಪತ್ರ ದೊರೆತ ನಂತರ ಮೃಗಾಲಯಕ್ಕೆ ಚಿರತೆ ಶಿ-ï್ಟ

 leopard
 leopard
Published on

ರಾಯಚೂರು ಕಳೆದ ಕೇಲವು ತಿಂಗಳಿAದ ತಾಲೂಕಿನ ಮಲಿಯಾÁದ ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದ ಚಿರತೆ ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.

ತಾಲೂಕಿನ ಅರಣ್ಯ ಪ್ರದೇಶದಲ್ಲಿ ಚಿರತೆ ಗೋಶಾಲೆಯ ಗೋವುಗಳ ಮೇಲೆ ದಾಳಿಸಿ ಐದಾರು ಗೋವಿಗಳನ್ನು ಸಾಯಿಸಿತ್ತು. ಅರಣ್ಯ ಇಲಾಖೆಯು ನಿರಂತರವಾಗಿ ಹಗಲು ರಾತ್ರಿ ಕಾರ್ಯಚರಣೆ ನಡೆಸಿತ್ತು, ಚಿರತೆ ಚಲನ ವಲನಗಳನ್ನು ಕ್ಯಾಮರಾಗಳ ಮೂಲಕ ಸೆರೆಹಿಡಿದು ಬೋನ್‌ಗಳನ್ನು ಅಳವಡಿಸಿತ್ತು,

ಅರಣ್ಯ ಇಲಾಖೆ ಅಽಕಾರಿಗಳ ನಿದ್ದೆಗೆಡಿಸಿದ್ದ ಚಿರತೆ ಆಕಳು, ಮೇಕೆ ತಿಂದು ಹಾಕಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯ ಜಾಡು ಹಿಡಿಯಲು ನಾಲ್ಕು ಬೋನ್‌ಗಳನ್ನು ಅಳಡಿಸಿದ್ದ ಅರಣ್ಯ ಇಲಾಖೆ ಕೊನೆಗೂ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಯಶಸ್ವು ಕಂಡಿದೆ. ಜನ,ಜಾನುವಾರುಗಳು ಮಲಿಯಾಬಾದ ಸುತ್ತಮುತ್ತ ಸಂಚರಿಸಲು ಭಯಭೀತರಾಗಲು ಕಾರಣವಾಗಿತ್ತು.

ಅನೇಕ ಬಾರಿ ಜಾನುವಾರುಗಳನ್ನು ತಿಂದು ಹಾಕಿದ್ದರೂ ಚಿರತೆಯ ಜಾಡು ಮಾತ್ರ ದೊರಕಿರಲಿಲ್ಲ. ಕಳೆದ ವಾರ ಗೋಶಾಲೆಗೆ ನುಗ್ಗಿ ಆಕಳು ತಿಂದು ಪರಾರಿಯಾಗಿತ್ತು. ಅರಣ್ಯ ಇಲಾಖೆ ಬೋನ್ ಅಳವಡಿಸುವ ಜೊತೆಗೆ ತಂಡಗಳನ್ನು ರಚಿಸಿ ಗಸ್ತು ಸಂಚರಿಸಲು ವ್ಯವಸ್ಥೆ ಮಾಡಿತ್ತು. ಮೂರರಿಂದ ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಽಕಾರಿಗಳ ಪ್ರಯತ್ನವನ್ನು ಗ್ರಾಮಸ್ಥರು ಶ್ಲಾöಸಿದ್ದಾರೆ.

ಪೋಟೊಗಾಗಿ ಮುಗೆಬಿದ್ದ ಜನ

ಮಲಿಯಾಬಾದ್‌ನ ಅರಣ್ಯ ಪ್ರದೇಶದ ಬೋನಿಗೆ ಸೆರೆಯಾಗಿದೆ, ಚಿರತೆ ನೋಡಲು ಗ್ರಾಮದ ಜನರೆಲ್ಲ ಚಿರತೆಯೊಂದಿಗೆ ಸೆಲಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಅರಣ್ಯ ಇಲಾಖೆ ಅಽಕಾರಿಗಳ ಜನರನ್ನು ನಿಯಂತ್ರಣ ಹರ ಸಾಹಸ ಪಟ್ಟರು, ಕೊನೆಗೆ ಚಿರತೆ ಬೋನನ್ನು, ಟ್ರಾಕ್ಟರ್‌ನಲ್ಲಿರಿಸಿ ಚಿರತೆ ಕಾಣದಂತೆ ಮರೆ ಮಾಚಿದರೂ ಜನರು ಮಾತ್ರ ಚಿರತೆ -ೆÇÃಟೋ ಪಡೆಯಲು ದುಂಬಾಲು ಹತ್ತಿದರು. ಮಲಿಯಾಬಾದ್ ನಿಂದ ರಾಯಚೂರಿಗೆ ತರುವವರೆಗೂ ಚಿರತೆಯಂತೆ ಬಿನ್ನಟ್ಟಿ -ÉÇÃಟೋ ಪಡೆದುಕೊಂಡು ಖುಷಿಪಟ್ಟರು.

--------

ಬಾಕ್ಸ್

--------

ಕಳೆದ ಸುಮಾರು ತಿಂಗಲಿನಿAದ ಮಲಿಯಾಬಾದ್ ಗ್ರಾಮದ ಹತ್ತಿರ ಚಿರತೆಯೊಂದು ಪ್ರತ್ಯಕ್ಷ÷್ಯವಾಗಿದ್ದು, ಸೆರೆಹಿಡಿಯಲು ಹಾಕಿದ್ದ ಬೋನಿಗೆ ಚಿರತೆ ಬಿದ್ದಿದೆ.ಸೆರೆ ಹಿಡಿಯಲಾದ ಗಂಡು ಚಿರತೆಯನ್ನು ಪಶು ವೈದ್ಯರ ಸಲಹೆಯ

ಮೇರೆಗೆ ಅವರಿಂದ ಪ್ರಮಾಣ ಪತ್ರ ದೊರೆತ ನಂತರ ಚಿರತೆಯನ್ನು ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು.

ಪ್ರವೀಣ ಕುಮಾರ ಉಪ ಅರಣ್ಯ ಸಂರಕ್ಷಣಾಽಕಾರಿ ಅರಣ್ಯ ಇಲಾಖೆ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net