Metro ಪ್ರಯಾಣ ದುಬಾರಿ! ಎಷ್ಟು ಹೆಚ್ಚಳ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Namma Metro
Published on

ಬೆಂಗಳೂರು: ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ ರೈಲಿನ (Metro Train) ಪ್ರಯಾಣ ದರವೂ ಏರಿಕೆಯಾಗಿದೆ. ದರ ಏರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಭಾನುವಾರದಿಂದಲೇ (ಫೆ.9) ಟಿಕೆಟ್ ದರ ಶೇ.46 ಹೆಚ್ಚಳವಾಗಿದೆ.

ಸ್ಮಾರ್ಟ್​ಕಾರ್ಡ್​ಗಳ ಬಳಕೆದಾರರಿಗೆ ಶೇ.5 ರಿಯಾಯಿತಿ ನೀಡಿ, ತುಸು ಸಮಾಧಾನ ಕೊಟ್ಟಿದೆ. ಸದ್ಯದ ಏರಿಕೆ ಪ್ರಕಾರ, 0-2 ಕಿಮೀ ಪ್ರಯಾಣಕ್ಕೆ 10 ರೂ. ಮತ್ತು 25-30 ಕಿ.ಮೀ. ಪ್ರಯಾಣಕ್ಕೆ 90 ರೂ. ಆಗಲಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ಮೆಟ್ರೋ (Metro) ಪ್ರಯಾಣ ದರ ಪರಿಷ್ಕರಣೆ ಸಂಬಂಧ 2024 ಸೆ.7ರಂದು ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿತ್ತು. ಪರಿಷ್ಕೃತ ದರದ ಶಿಫಾರಸು ವರದಿಯನ್ನು 2024ರ ಡಿಸೆಂಬರ್ 16ರಂದು ಸಮಿತಿ ಸಲ್ಲಿಸಲಾಗಿತ್ತು. ಇದಕ್ಕೆ ಬಿಎಂಆರ್​ಸಿಎಲ್ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕೃತ ದರ ಜಾರಿಗೊಳಿಸಿದೆ.

ನಾನ್ ಪೀಕ್ ಅವರ್​ನಲ್ಲೂ ರಿಯಾಯಿತಿ: ಈ ಮೊದಲು ಪೀಕ್ ಅವರ್​ನಲ್ಲಿ ಮಾತ್ರ ಶೇ.5 ರಿಯಾಯಿತಿ ಇತ್ತು. ಇದೀಗ ನಾನ್ ಪೀಕ್ ಅವರ್​ನಲ್ಲಿಯೂ ಶೇ.5 ರಿಯಾಯಿತಿ ನೀಡಲಾಗಿದೆ. ನಾನ್​ಪೀಕ್ ಅವರ್ ಮತ್ತು ಪೀಕ್ ಅವರ್ ಸೇರಿ ಸ್ಮಾರ್ಟ್ ಕಾರ್ಡ್​ಗಳ ಮೇಲೆ ಶೇ.10 ರಿಯಾಯಿತಿ ನೀಡಲಾಗಿದೆ.

ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 4 ಗಂಟೆವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ. ಎಲ್ಲ ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ (ಜ. 26, ಆಗಸ್ಟ್ 15, ಅ. 2) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್​ಗಳ ಮೇಲೆ ಶೇ.10 ರಿಯಾಯಿತಿ ಘೋಷಿಸಲಾಗಿದೆ. ಕನಿಷ್ಠ 90 ರೂ.

  • ಸ್ಮಾರ್ಟ್​ಕಾರ್ಡ್​ನ ಮೇಲೆ ಶೇ.5 ರಿಯಾಯಿತಿ ಮುಂದುವರಿಕೆ ಆಗಿದೆ. ಮೊದಲು ಸ್ಮಾರ್ಟ್
  • ಕಾರ್ಡ್​ನಲ್ಲಿ 50 ರೂ. ಕನಿಷ್ಠ (ಮಿನಿಮಮ್ ಹಣ ಇರಬೇಕಿತ್ತು. ಈಗ
  • ಕನಿಷ್ಠ 90 ರೂ. ಇರಲೇಬೇಕು ಎಂದು ಘೋಷಿಸುವ ಮೂಲಕ ಕನಿಷ್ಠ ಮೊತ್ತ 40 ರೂ. ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ದರದ ವಿವರ

  • 0-2 ಕಿಮೀ ಪ್ರಯಾಣಕ್ಕೆ -₹10
  • 2-4 ಕಿಲೋಮೀಟರ್​ಗೆ -₹20
  • 4-6 ಕಿಲೋಮೀಟರ್​ಗೆ -₹30
  • 6-8 ಕಿಲೋಮೀಟರ್​ಗೆ -₹40
  • 8-10 ಕಿಲೋಮೀಟರ್​ಗೆ -₹50
  • 10-15 ಕಿಲೋಮೀಟರ್​ಗೆ -₹60
  • 15-20 ಕಿಲೋಮೀಟರ್​ಗೆ -₹70
  • 20-25 ಕಿಲೋಮೀಟರ್​ಗೆ -₹80
  • 25-30 ಕಿಲೋಮೀಟರ್​ಗೆ -₹90
  • 30 ಕಿಮೀಗಿಂತ ಹೆಚ್ಚಿನದಕ್ಕೆ -₹90

ಹಿಂದಿನ ದರ

  • ಚಲ್ಲಘಟ್ಟದಿಂದ ವೈಟ್​ಫೀಲ್ಡ್​ಗೆ ಟೋಕನ್-60 ರೂ, ಸ್ಮಾರ್ಟ್ ಕಾರ್ಡ್-57 ರೂ.
  • ಮಾದಾವರದಿಂದ ರೇಷ್ಮೆ ಸಂಸ್ಥೆವರೆಗೆ ಟೋಕನ್-60 ರೂ., ಸ್ಮಾರ್ಟ್ ಕಾರ್ಡ್-57 ರೂ.
  • ಚಲ್ಲಘಟ್ಟದಿಂದ ಕೆಂಗೇರಿಗೆ ಟೋಕನ್-10 ರೂ., ಸ್ಮಾರ್ಟ್ ಕಾರ್ಡ್-9.5 ರೂ.
  • ಚಲ್ಲಘಟ್ಟದಿಂದ ಕೆಂಗೇರಿ ಬಸ್ ಟರ್ವಿುನಲ್ ಟೋಕನ್-15 ರೂ., ಸ್ಮಾರ್ಟ್​ಕಾರ್ಡ್-14.25 ರೂ.
  • ಚಲ್ಲಘಟ್ಟದಿಂದ ಪಟ್ಟಣಗೆರೆ ಟೋಕನ್-15 ರೂ., ಸ್ಮಾರ್ಟ್ ಕಾರ್ಡ್-14.25 ರೂ.
  • ಚಲ್ಲಘಟ್ಟದಿಂದ ಜ್ಞಾನಭಾರತಿ ಟೋಕನ್-18 ರೂ., ಸ್ಮಾರ್ಟ್ ಕಾರ್ಡ್-17.1 ರೂ.
  • ಚಲ್ಲಘಟ್ಟದಿಂದ ರಾಜರಾಜೇಶ್ವರಿನಗರ ಟೋಕನ್-20 ರೂ., ಸ್ಮಾರ್ಟ್ ಕಾರ್ಡ್-19 ರೂ.
  • ಚಲ್ಲಘಟ್ಟದಿಂದ ನಾಯಂಡಹಳ್ಳಿ ಟೋಕನ್-22 ರೂ., ಸ್ಮಾರ್ಟ್ ಕಾರ್ಡ್-20.9 ರೂ.
  • ಚಲ್ಲಘಟ್ಟದಿಂದ ಮೈಸೂರು ರಸ್ತೆ ಟೋಕನ್-25 ರೂ., ಸ್ಮಾರ್ಟ್ ಕಾರ್ಡ್-23.75 ರೂ.
  • ಚಲ್ಲಘಟ್ಟದಿಂದ ದೀಪಾಂಜಲಿನಗರ ಟೋಕನ್-28 ರೂ., ಸ್ಮಾರ್ಟ್ ಕಾರ್ಡ್-26.6 ರೂ.
  • ಚಲ್ಲಘಟ್ಟದಿಂದ ಅತ್ತಿಗುಪ್ಪೆ ಟೋಕನ್-30 ರೂ., ಸ್ಮಾರ್ಟ್ ಕಾರ್ಡ್-28.5 ರೂ.
  • ಚಲ್ಲಘಟ್ಟದಿಂದ ವಿಜಯನಗರ ಟೋಕನ್-30 ರೂ., ಸ್ಮಾರ್ಟ್ ಕಾರ್ಡ್-28.5 ರೂ.
  • ಚಲ್ಲಘಟ್ಟದಿಂದ ಹೊಸಹಳ್ಳಿ ಟೋಕನ್-35 ರೂ., ಸ್ಮಾರ್ಟ್ ಕಾರ್ಡ್-33.25 ರೂ.
  • ಚಲ್ಲಘಟ್ಟದಿಂದ ಮಾಗಡಿರಸ್ತೆ ಟೋಕನ್-35 ರೂ., ಸ್ಮಾರ್ಟ್ ಕಾರ್ಡ್-33.25 ರೂ.
  • ಚಲ್ಲಘಟ್ಟದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಟೋಕನ್-38 ರೂ., ಸ್ಮಾರ್ಟ್ ಕಾರ್ಡ್-36.1 ರೂ.
  • ಚಲ್ಲಘಟ್ಟದಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಟೋಕನ್-40 ರೂ., ಸ್ಮಾರ್ಟ್ ಕಾರ್ಡ್-38 ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net