

ಡಂಬಳ: ಡಂಬಳ ಗ್ರಾಪಂ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಶಿವಲೀಲಾ ದೇವಪ್ಪ ಬಂಡಿಹಾಳ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮವ್ವ ದೊಡ್ಡಪ್ಪ ಕಾಶಭೋವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಉದಯಕುಮಾರ ಯಲಿವಾಳ ಕಾರ್ಯನಿರ್ವಹಿಸಿದರು.
ಗ್ರಾಪಂ 29 ಸದಸ್ಯ ಸ್ಥಾನ ಹೊಂದಿದ್ದು, ಮುಂಡರಗಿ ತಾಲೂಕಿನಲ್ಲಿಯೇ ದೊಡ್ಡ ಪಂಚಾಯಿತಿಯಾಗಿದೆ. ಹತ್ತು ವರ್ಷಗಳ ನಂತರ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿದ್ದು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ್, ಗೋಣಿಬಸಪ್ಪ ಕೋರ್ಲಹಳ್ಳಿ, ವಿ.ಎಸ್.ಯರಾಶಿ, ನಿಂಗಪ್ಪ ಪಲ್ಲೇದ, ಮರಿಯಪ್ಪ ಸಿದ್ದಣ್ಣವರ, ಸಣ್ಣಹನಮಪ್ಪ ಬಂಡಿ, ಜಾಕೀರ ಮೂಲಿಮನಿ, ಬಸವರಾಜ ಪೂಜಾರ, ಮಹೇಶ ಗಡಗಿ, ಪಿಡಿಒ ಅನೀಲಗೌಡ ಮಲ್ಲಗೌಡ್ರ, ಕಾರ್ಯದರ್ಶಿ ಜ್ಯೋತಿ ಅಂಗಡಿ ಇತರರಿದ್ದರು.