

ಬೆಳಗಾವಿ: ದೇಶದಲ್ಲಿನ ಔಷಧ ಪದ್ಧತಿಯ ಉದ್ಯಮಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪರಿಣತರ ಸಹಕಾರದಿಂದ ಸಾಮಾಜಿಕ ಆರೋಗ್ಯ ಸುಧಾರಿಸಲು ಶ್ರಮಿಸಬೇಕು. ಪ್ರಧಾನಮಂತ್ರಿಗಳ ಆಶಯದಂತೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧ ಲಭಿಸುವಂತಾಗಬೇಕು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ, ಕಾಹೆರ್ ಕುಲಾಪತಿ ಡಾ. ಪ್ರಭಾಕರ ಕೋರೆ ಆಶಯ ವ್ಯಕ್ತಪಡಿಸಿದರು.
ನಗರದ ಕೆಎಲ್‌ಇ ಾರ್ಮಾಸಿ (ಔಷಧ) ಮಹಾವಿದ್ಯಾಲಯವು ಕೆಎಲ್ಇ ಶತಮಾನೋತ್ಸವ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಔಷಧ ತಂತ್ರಜ್ಞಾನ ಮತ್ತು ೈಟೊಾರ್ಮಾಸ್ಯುಟಿಕಲ್ಸ್‌ನಲ್ಲಿನ ನಾವೀನ್ಯ ಕುರಿತ 12ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯಕೀಯ ಔಷಧ ಪದ್ಧತಿಗಳು ಅನಾರೋಗ್ಯ ಹೋಗಲಾಡಿಸುವುದರ ಜತೆಯಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚಿನ ಯಶಸ್ಸು ಸಾಸಬಹುದು ಎಂದರು.
ಸಂಶೋಧನೆಗಳು ಹೆಚ್ಚುತ್ತಿರುವ ಔಷಧದ ಬೇಡಿಕೆಯನ್ನು ಸಕಾಲಕ್ಕೆ ಪೂರೈಸುವಂತಾಗಬೇಕು. ಅಲೋಪಥಿ, ಆಯುರ್ವೇದ್ ಹಾಗೂ ಇತರ ಸಾಂಪ್ರದಾಯಿಕ ಔಷಧಗಳು ಭರವಸೆ ಮೂಡಿಸಿವೆ. ಸಾಂಪ್ರದಾಯಿಕ ಔಷಧ ತಂತ್ರಜ್ಞಾನದಲ್ಲಿ ಹೂಡಿಕೆ ಹೆಚ್ಚಾಗಿ, ಅಲೋಪಥಿಯಂತೆ ಬೃಹತ್ ಉದ್ಯಮವಾಗಬೇಕು. ಆಸ್ಪತ್ರೆಗಳೂ ಔಷಧ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ಸಂಶೋಧನೆಗೆ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಸೊಸೈಟಿ ಾರ್ ಎಥನೋಾರ್ಮಾಕೋಲಾಜಿ (ಎಸ್‌ಎ್ಇ) ಸಂಸ್ಥೆ ಸಂಸ್ಥಾಪಕ ಪ್ರೊ.ುಲೋಕ ಮುಖರ್ಜಿ ಮಾತನಾಡಿ, ಗ್ರಾಮೀಣ ಭಾರತದದಲ್ಲಿ ಸರಿಯಾಗಿ ಔಷಧಗಳು ಸಿಗುತ್ತಿಲ್ಲ. ಆದರೆ, ಗ್ರಾಮೀಣ ಜನರ ಮನೆಬಾಗಿಲಿಗೆೆ ಸಕಲ ಔಷಧಗಳೂ ನಿರಂತರವಾಗಿ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು. ಅದಕ್ಕಾಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಕೈಜೋಡಿಸಿ ಜನರ ಆರೋಗ್ಯ ಕಾಪಾಡಬೇಕು ಎಂದರು.
ಎಸ್‌ಎ್ಇ ಸಂಸ್ಥೆಯ ಉಪಾಧ್ಯಕ್ಷ ಡಾ.ಸಿ.ಕೆ. ಕಟಿಯಾರ ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ಔಷಧಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ವಿವಿಧ ದೇಶಗಳ ಶಿಕ್ಷಣತಜ್ಞರು, ಸಂಶೋಧಕರು, ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಸಮ್ಮೇಳನವು ನೈಸರ್ಗಿಕ ಉತ್ಪನ್ನ ಸಂಶೋಧನೆ, ಔಷಧ ಅನ್ವೇಷಣೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಜಾಗತಿಕ ಸಹಯೋಗಗಳು ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಮಾ.8ರವರೆಗೆ ಕಾರ್ಯಾಗಾರ ನಡೆಯಲಿದೆ.
ಸಮ್ಮೇಳನದ ಸಂಘಟನಾಧ್ಯಕ್ಷ ಡಾ. ಸುನಿಲ್ ಜಲಾಲ್‌ಪುರೆ ಸ್ವಾಗತಿಸಿ, ಪರಿಚಯಿಸಿದರು. ಕಾಹೆರ್‌ನ ಉಪಕುಲಪತಿ ಡಾ. ನಿತಿನ್ ಗಂಗಾನೆ, ಅಸ್ಟ್ರಿಯಾದ ಫ್ರರ್ಮಾಸಿಟ್ಯುಕಲ್ ಸೈನ್ಸ್ ಯೂನಿವರ್ಸಿಟಿ ಆ್ ಗ್ರಜ್‌ನ ಪ್ರೊ. ರುಡಾಲ್ ಬಾಯುರ್, ಐಸಿಎಂಆರ್ ನಿರ್ದೇಶಕ ಡಾ. ಸುಬರ್ಣಾ ರಾಯ್, ಎಸ್‌ಎ್ಇ ಸಂಸ್ಥೆಯ ಅಧ್ಯಕ್ಷೆ ಪ್ರೊ. ನಮೃತಾ ಲಾಲ್, ಉಪಾಧ್ಯಕ್ಷ ಇಂದ್ರನೀಲ್ ದಾಸ್, ಡಾ.ಎಂ.ಎಸ್. ಗಣಾಚಾರಿ ಇತರರಿದ್ದರು. ಪ್ರಮೋದ ಹುರಕಡ್ಲೆ ವಂದಿಸಿದರು.