ಅಫಜಲಪುರ; ಚಿರತೆ ಸಂಚಾರ, ಎಚ್ಚರಿಕೆಯಿಂದ ಇರಿ ಹಳ್ಳಿ ಜನ

Leopard
ಸಾಂದರ್ಭಿಕ ಚಿತ್ರ
Published on

ಅಫಜಲಪುರ: ಆಳಂದ, ಅಫಜಲಪುರ ಗಡಿ ಭಾಗದ ಕುಲಾಲಿ ಸುತ್ತಲಿನ ಹೊಲಗಳಲ್ಲಿ ಚಿರತೆ ಸಂಚರಿಸಿರುವ ಬಗ್ಗೆ ಶಂಕೆ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಜಗನ್ನಾಥ ಕೋರಳ್ಳಿ ಸಲಹೆ ನೀಡಿದರು.

ಕುಲಾಲಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಶನಿವಾರ ನಮ್ಮ ತಂಡ ಭೇಟಿ ನೀಡಿ ಎಲ್ಲೆಡೆ ಸಂಚರಿಸಿ ಮಾಹಿತಿ ಕಲೆ ಹಾಕುತ್ತಿದೆ. ಒಬ್ಬೊಬ್ಬರೇ ಹೊರಗಡೆ ತಿರುಗಾಡಬೇಡಿ. ಹೊಲಗಳಿಗೆ ಗುಂಪಾಗಿ ಹೋಗಿ. ಜಮೀನುಗಳಲ್ಲಿ ವಾಸವಾಗಿರುವ ರೈತರು ಹಾಗೂ ಜನ ಅಲರ್ಟ್ ಆಗಿರಬೇಕು ಎಂದರು.

ಸುತ್ತಲಿನ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಡಿ ಡಂಗೂರ ಸಾರಲಾಗುತ್ತಿದೆ. ಎ¯್ಲÁದರೂ ಚಿರತೆ ಕಾಣಿಸಿದರೆ ತಕ್ಷಣ ಮೊ.೯೯೭೨೫ ೬೮೮೮೮, ೭೩೩೮೫ ೩೫೩೦೮ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net