ಏರೋ ಇಂಡಿಯಾ, ಜಿಮ್ ಸಮಾವೇಶ: ಬಿಬಿಎಂಪಿ ಮುಖ್ಯ ಆಯುಕ್ತರಿಂದ ಸಿದ್ಧತೆ ಪರಿಶೀಲನೆ

commsr visit
Published on

ಬೆಂಗಳೂರು: ಮುಂದಿನ ವಾರ ನನಗರದಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಮೇಳ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಹಿನ್ನೆಲೆ ರಸ್ತೆ ಸೇರಿದಂತೆ ಇನ್ನಿತರ ನಾಗರಿಕ ಸೌಲಭ್ಯ ಒದಗಿಸುವ ಕೆಲಸಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪರಿಶೀಲನೆ ನಡೆಸಿದರು.

ಫೆ.10ರಿಂದ 14ರವರೆಗೆ ಯಲಹಂಕದ ವಾಯುಪಡೆ ಕೇಂದ್ರದಲ್ಲಿ ಏರ್ ಶೋ ನಡೆಯಲಿದೆ. ಫೆ.11ರಿಂದ 14 ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಅದಕ್ಕಾಗಿ ವಿವಿಧ ರಾಷ್ಟ್ರಗಳಿಂದ ಗಣ್ಯರು, ಹೂಡಿಕೆದಾರರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು, ಜಂಕ್ಷನ್ ಸೇರಿ ಮೂಲಸೌಕರ್ಯದ ಕಾಮಗಾರಿಯನ್ನು ಪರಿಶೀಲಿಸಿ, ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಏರೋ ಇಂಡಿಯಾ ನಡೆಯುವ ಯಲಹಂಕ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿ ಅಲ್ಲಿ ರಸ್ತೆ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು. ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗದಂತೆ ಈಗಾಗಲೇ ಏರ್‌ೆರ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ನಿಷೇಧ ಹಾಗೂ ಮಳಿಗೆಗಳ ಬಂದ್ ಮಾಡಿರುವುದನ್ನು ಪರಿಶೀಲಿಸಿದರು. ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಉಚಿತ ಪಾರ್ಕಿಂಗ್ ಹಾಗೂ ಏರ್ ಶೋಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಬಗ್ಗೆ ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲೂ ಪರಿಶೀಲನೆ:

ಮಧ್ಯಾಹ್ನ ನಗರದ ಮೇಖ್ರಿ ವೃತ್ತ ಸೇರಿ ಪ್ರಮುಖ ಜಂಕ್ಷನ್‌ಗಳನ್ನು ಮುಖ್ಯ ಆಯುಕ್ತರು ಪರಿಶೀಲಿಸಿದರು. ಕೆಲವೆಡೆ ತ್ಯಾಜ್ಯ ಮಣ್ಣ ರಸ್ತೆ ಬದಿ ತೆರವಾಗದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್, ಝೀರೋ ಟಾಲರೆನ್ಸ್ ವಲಯ, ಮೀಡಿಯನ್ಸ್‌ಗಳ ಎತ್ತಿರಿಸುವಿಕೆ, ಕಬ್ಬಿಣದ ಗ್ರಿಲ್‌ಗಳ ಅಳವಡಿಕೆ, ಪಾದಚಾರಿ ದಾಟುವಿಕೆಯ ಮಾರ್ಕಿಂಗ್ ಸೇರಿ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್ ತೆರವುಗೊಳಿಸುವಂತೆ ತಾಕೀತು ಮಾಡಿದರು.

ಈ ವೇಳೆ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತ ಕರೀಗೌಡ, ಪ್ರಧಾನ ಅಭಿಯಂತರ ಪ್ರಹ್ಲಾ, ಬಿ.ಎಸ್.ಡಬ್ಲ್ಯೂ.ಎಂ.ಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಸೇರಿ ಇನ್ನಿತರ ಅಧಿಕಾರಿಗಳು ಇದ್ದರು.

ಮೊದಲ ಬಾರಿಗೆ ಎಲ್ಇಡಿ ಕರ್ಬ್ಸ್ ಅಳವಡಿಕೆ:

ನಗರದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ವೃತ್ತ (ಹಡ್ಸನ್ ವೃತ್ತ), ವಿಧಾನಸೌಧದ ಶಾಸಕರ ಭವನದ ಬಳಿಯ ವೃತ್ತ ಹಾಗೂ ಮೌಂಟ್ ಕಾರ್ಮಲ್ ಕಾಲೇಜು ಬಳಿಯ ವೃತ್ತದ ಬಳಿಕ ಎಲ್ಇಡಿ ಕರ್ಬ್ಸ್ (ಎ್ಆರ್‌ಪಿ) ಅಳವಡಿಕೆ ಮಾಡಲಾಗುತ್ತಿದೆ. ವಾಹನಗಳ ಸಂಚಾರದ ವೇಳೆ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಆಕರ್ಷಕವಾಗಿ ಕಾಣುವ ದೃಷ್ಟಿಯಿಂದ ಎಲ್ಇಡಿ ಕರ್ಬ್ಸ್ ಜೋಡಣಾ ಕಾರ್ಯ ನಡೆಸಲಾಗುತ್ತಿದೆ.

ಚಾಲಕರಿಗಾಗಿ ಇಂದಿರಾ ಕ್ಯಾಂಟೀನ್:

ಜಿಕೆವಿಕೆಯಿಂದ ಏರೋ ಇಂಡಿಯಾ ಸ್ಥಳಕ್ಕೆ ತೆರಳು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾರ್ವಜನಿಕರಿಗೆ ಇಲ್ಲಿಯೇ ಉಚಿತ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ವಾಹನ ಚಾಲಕರ ಅನುಕೂಲಕ್ಕಾಗಿ ಸಂಚಾರಿ ಇಂದಿರಾ ಕ್ಯಾಂಟೀನ್ ಹಾಗೂ ಇ ಟಾಯ್ಲೆಟ್ ಸೌಲಭ್ಯ ಕಲ್ಪಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net