ಅಡ್ಯಾರ್‌ನಲ್ಲಿ ಟ್ಯಾಂಕರ್‌ಗೆ ಓಮ್ನಿ ಡಿಕ್ಕಿ; ಇಬ್ಬರು ಬಲಿ, ಓರ್ವ ಗಂಭೀರ

IMG-20210528-WA0025
Published on

ಮಂಗಳೂರು: ನಗರ ಹೊರ ವಲಯದ ಅಡ್ಯಾರ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯಹ್ನ ಘಟನೆ ನಡೆದಿದೆ. ಪುದು ಗ್ರಾಮದ ಅಮೆಮಾರ್‌ ನಿವಾಸಿ ದಾವೂದ್‌ (22) ಮತ್ತು ಕುಂಜತ್ಕಲ ನಿವಾಸಿ ಉಸೈನ್‌(27) ಮೃತಪಟ್ಟವರು. ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಹೋಗುತ್ತಿದ್ದ ಓಮ್ನಿ ಅಡ್ಯಾರ್‌ನ ಮಾಂಡೋವಿ ಶೋರೂಂ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಒಣಮೀನು ವ್ಯಾಪಾರಿಗಳಾಗಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net