

ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಕಳ್ಳರು ಬಳಸಿದ ವಾಹನವನ್ನು ಗುರುತಿಸಿದ್ದು, ನಂಬರ್ ಪ್ಲೇಟ್ ನಕಲಿಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೇರಳ ಆರ್‌ಟಿಒ ಪೆರ್ಲದಲ್ಲಿ ಅಳವಡಿಸಿದ ಹೈ ಎಂಡ್ ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿಗಳು ಲಭ್ಯವಾಗಿದೆ.
ಪೆರ್ಲ-ಅಡ್ಯನಡ್ಕ ರಸ್ತೆಯಲ್ಲಿರುವ ಸಿಸಿ ಕ್ಯಾಮರಾಗಳ ತಪಾಸಣೆ ನಡೆಸಿದ ಪೊಲೀಸರಿಗೆ ಕೇರಳ ಭಾಗದಿಂದ ಕಾರಿನಲ್ಲಿ ಆಗಮಿಸಿದ ಕಳ್ಳರು ಮತ್ತೆ ಅತ್ತ ಕಡೆಯೇ ಸಾಗಿದ ಬಗ್ಗೆ ದೃಶ್ಯಾವಳಿ ಲಭಿಸಿದೆ. ವಾಹನಗಳನ್ನು ಸುಲಭವಾಗಿ ಪತ್ತೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ರಸ್ತೆ ಬದಿ ಅಳವಡಿಸಿದ ಅತ್ಯಾಧುನಿಕ ಕ್ಯಾಮರಾಗಳು ಪೊಲೀಸರಿಗೆ ನೆರವಾಗಿದೆ.
ಕಾಸರಗೋಡಿನಿಂದ ಆಗಮನ: ಪ್ರಾಥಮಿಕ ತನಿಖೆಯಲ್ಲಿ ಬ್ರೀಝಾ ಕಾರಿನಲ್ಲಿ ಕಳ್ಳರು ಕಾಸರಗೋಡು ಭಾಗದಿಂದ ಆಗಮಿಸಿದ್ದು ದೃಢಪಟ್ಟಿದೆ. ಮರಳಿ ಅದೇ ರಸ್ತೆ ಮೂಲಕ ಬಂದ ಕಾರು ಪೆರ್ಲ ಆರ್‌ಟಿಒ ತಪಾಸಣಾ ಕೇಂದ್ರದ ಮೂಲಕ ಸಾಗಿ ಬಳಿಕ ಬದಿಯಡ್ಕಕ್ಕೆ ತೆರಳದೆ ಪುತ್ತಿಗೆ ಸೀತಾಂಗೋಳಿ ರಸ್ತೆಗೆ ತಿರುಗಿದ ದೃಶ್ಯ ಸೆರೆಯಾಗಿದೆ. ಈ ಕಾರು ಯಾರದ್ದು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ೨ ಕೆ.ಜಿ.ಗೂ ಅ?ಕ ಚಿನ್ನ ಹಾಗೂ ೧೭ ಲಕ್ಷ ರೂ.ಗೂ ಅ?ಕ ಮೊತ್ತವನ್ನು ಕದ್ದೊಯ್ದ ಕಳ್ಳರ ಪತ್ತೆಗೆ ಪೊಲೀಸರು ಕಾಸರಗೋಡಿನ ಆಸುಪಾಸಿನಲ್ಲಿ ಬೀಡು ಬಿಟ್ಟಿದ್ದಾರೆ. ಆರೋಪಿಗಳು ಗೋವಾ ಅಥವಾ ಉತ್ತರಭಾರತಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದೆ.
ಕಾಗದದ ನಡುವೆ ಉಳಿದ ಚಿನ್ನ: ಕಳ್ಳರು ಲಾಕರ್ ಒಂದನ್ನು ತುಂಡರಿಸಿದ್ದು ಅದರಲ್ಲಿ ಕಾಗದ ಪತ್ರಗಳು ಕಾಣುತ್ತಿದ್ದಂತೆ ಅದನ್ನು ಅಲ್ಲಿಯೇ ಬಿಟ್ಟಿದ್ದಾರೆ. ಬ್ಯಾಂಕ್ ಅ?ಕಾರಿಗಳು ಕಾಗದ ಪತ್ರಗಳ ನಡುವೆ ಇಟ್ಟಿದ್ದ ಚಿನ್ನ ಉಳಿದಿದೆ. ಹೀಗೆ ಸುಮಾರು ೨.೫ ಕೆ.ಜಿ. ಚಿನ್ನ ಕಳ್ಳರ ಪಾಲಾಗುವುದು ತಪ್ಪಿದೆ.