

ಹುಕ್ಕೇರಿ: ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಕೀಲರು ಉತ್ತಮವಾಗಿ ವಾದ ಮಂಡಿಸಿದರೆ, ನ್ಯಾಯಾಧೀಶರು ಒಳ್ಳೆಯ ತೀರ್ಪು ನೀಡಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಹೇಳಿದರು.
ಸಮೀಪದ ಕೋರ್ಟ್ ಆವರಣದ ವಕೀಲರ ಸಂದ ಸಭಾಭವನದಲ್ಲಿ ಸೋಮವಾರ ಎರಡನೇ ಬಾರಿ ಸಂದ ಅಧ್ಯರಾಗಿ ಆಯ್ಕೆಯಾದ ಕೆ.ಬಿ.ಕುರಬೇಟ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ವಕೀಲರ ವೃತ್ತಿಯಲ್ಲಿರುವ ಸ್ವಾತಂತ್ರ$್ಯ ಬೇರೆ ಯಾವ ವೃತ್ತಿಯಲ್ಲಿಲ್ಲ. ಆದ್ದರಿಂದ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾ.8ರಂದು ಜರುಗಲಿರುವ ಲೋಕ ಅದಾಲತ್ನಲ್ಲಿ ವಕೀಲರು ಸಾಧ್ಯವಾದಷ್ಟು ಕದಾರರ ಪ್ರಕರಣ ಇತ್ಯರ್ಥಪಡಿಸಬೇಕು ಎಂದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಿ.ಕುರಬೇಟ, ರಾಜ್ಯ ವಕೀಲರ ಪರಿಷತ್ ಉಪಾಧ್ಯ ವಿನಯ ಮಾಂಗಳೇಕರ ಮತ್ತು ಸದಸ್ಯ ಕೆ.ಬಿ.ನಾಯಿಕ, ಹಿರಿಯ ವಕೀಲ ರಾಮಚಂದ್ರ ಜೋಶಿ, ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿದರು. ಉಪಾಧ್ಯ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದ್ಾ, ಜಂಟಿ ಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ವಕೀಲರಾದ ಎ.ಎಸ್.ಹುಲ್ಲೋಳಿ, ಪ್ರಕಾಶ ಪಾಟೀಲ, ಪಿ.ಆರ್.ಚೌಗಲಾ, ಎ.ಎಂ.ಹ್ಯಾಟಗೋಳ, ಬಿ.ಕೆ.ಮಗೆನ್ನವರ, ಬಿ.ಆರ್.ಚಂದರಗಿ, ಸಿ.ಎಂ.ಸಂಸುದ್ದಿ, ಡಿ.ಕೆ.ಅವರಗೋಳ, ಆಶಾ ಸಿಂಗಾಡಿ, ಆರ್.ಬಿ.ಪಾಟೀಲ, ಹರೀಶ ದೊಡಲಿಂಗನವರ ಇತರರಿದ್ದರು. ವಕೀಲ ಎಚ್.ಎಲ್.ಪಾಟೀಲ ಸ್ವಾಗತಿಸಿದರು. ಶಿವಲಿಂಗ ತೇಲಿ ನಿರೂಪಿಸಿದರು. ಆರ್.ಬಿ.ಮೋಶಿ ವಂದಿಸಿದರು.