ರೇಶ್ಮೆ ಸೀರೆಯೊಂದಿಗೆ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು

theft
Published on

ಉಡುಪಿ: ನಗರದ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ವಕೀಲೆಯೊಬ್ಬರ ಮನೆಗೆ ಮಂಗಳವಾರ ಹಾಡಹಗಲೇ ನುಗ್ಗಿದ ಕಳ್ಳರು ರೇಶ್ಮೆ ಸೀರೆಯನ್ನೂ ಬಿಡದೆ ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ 10.45 ರಿಂದ ಮಧ್ಯಾಹ್ನ 2.10ರ ಅವಧಿಯಲ್ಲಿ ವಕೀಲೆ ವಾಣಿ ವಿ. ರಾವ್ (58) ಅವರ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ 45 ಸಾವಿರ ರೂ. ನಗದು, 4 ರೇಷ್ಮೆ ಸೀರೆ ಮತ್ತು 1 ಸಾಧಾರಣ ಸೀರೆ, 5 ಪವನ್ ತೂಕದ ಪಚ್ಚೆಕಲ್ಲಿನ ಬ್ರೇಸ್‌ಲೇಟ್, 6 ಪವನ್ ತೂಕದ 2 ಮುತ್ತಿನ ಬಳೆ , 5 ಪವನ್ ತೂಕದ ಚಿನ್ನದ 2 ಖಡಗ ಬಳೆಗಳು , 6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 1 ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ 2 ಜೊತೆ, ಜುಮ್ಕಿ ಮತ್ತು ಮಾಟಿ 2 ಜೊತೆ, 1 ಪವನ್ ತೂಕದ ಚಿನ್ನದ ತುಂಡುಗಳು ಮತ್ತು ಕೊಕ್ಕೆ, 3 ಪವನ್ ತೂಕದ ಚಿನ್ನದ ನೆಕ್ಲೇಸ್, 2 ಪವನ್ ತೂಕದ ಗ್ರೇನೆಟ್ ಹರಳಿನ ನೆಕ್ಲೇಸ್ ಮತ್ತು 3 ಪವನ್ ಗ್ರೇನೆಟ್ ಹರಳಿನ ಬಳೆ, 4 ಗ್ರಾಮ್ ತೂಕದ 6 ಚಿನ್ನದ ನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net