ಕರೋನಾ ಸೋಂಕು ತಗುಲಿಸಿಕೊಳ್ಳೋಕೆ ನಾನ್ ರೆಡಿ ಎಂದ ಕೊಳ್ಳೇಗಾಲದ ವಕೀಲ !

Coronaviurs 9 March 20
Published on

ಚಾಮರಾಜನಗರ: ಕರೋನಾ ವೈರಸ್ Covid19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲೆಡೆ, ಎಲ್ಲರೂ ತೆಗೆದುಕೊಳ್ಳುತ್ತಿದ್ದಾರೆ. ಈ ವೈರಸ್​ ತಡೆಗೆ ಔಷಧ ಇನ್ನೂ ಅಭಿವೃದ್ಧಿ ಪಡಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ Covid-19 ಎಂಬ ಕರೋನಾ ವೈರಾಣುವಿಗೆ ಪರಿಣಾಮಕಾರಿ ಔಷಧವನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ. ಇದಕ್ಕೊಂದು ಔಷಧ ಕಂಡು ಹುಡುಕಬೇಕು ಎಂದು ಜಾಗತಿಕ ಮಟ್ಟದಲ್ಲಿ ಸಂಶೋಧನೆಗಳು ನಡೆದಿವೆ. ಫಾರ್ಮಾ ಕಂಪನಿಗಳು ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿವೆ.

ಔಷಧಗಳು ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಜನರನ್ನು ಅರಸುತ್ತಿವೆ ಈ ಕಂಪನಿಗಳು. ಇದಕ್ಕಾಗಿ ಅಂತಹ ಜನರಿಗೆ ಸಾವಿರಾರು ಡಾಲರ್ ಹಣವನ್ನು ಪಾವತಿಸುವುದಕ್ಕೂ ಮುಂದಾಗಿವೆ. ಆದರೆ ಭಾರತದಲ್ಲಿ ಇಂತಹ ಪ್ರಯೋಗ ಮನುಷ್ಯರ ಮೇಲೆ ನಡೆಯುತ್ತಿರುವ ಸುದ್ದಿ ಕೇಳಿ ಬಂದಿಲ್ಲ. ಆದಾಗ್ಯೂ, ಕೊಳ್ಳೇಗಾಲದ ವಕೀಲರೊಬ್ಬರು ಪ್ರಯೋಗ ಪಶುವಾಗಲು ನಾನು ರೆಡಿ ಎಂದಿದ್ದು, ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ವಕೀಲ ಬಸವರಾಜು ಎಂಬುವವರು ಕರೊನಾ ಔಷಧಿ ಕಂಡು ಹಿಡಿಯಲು ನನ್ನ ದೇಹವನ್ನು ಪ್ರಯೋಗಕ್ಕಾಗಿ ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. ನನ್ನ ದೇಹಕ್ಕೆ ಕರೊನಾ ಇಂಜೆಕ್ಟ್ ಮಾಡಿ ಪ್ರಯೋಗಕ್ಕಾಗಿ ಬಳಸಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ PowerNewz ಆ್ಯಪ್​ನಲ್ಲಿ ಅಪ್ಲೋಡ್ ಆಗಿದ್ದು ಜನರ ಗಮನಸೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net