ಲೈಂಗಿಕ ದೌರ್ಜನ್ಯ ಪ್ರಕರಣ ನಾಲ್ವರ ವಿರುದ್ಧ ಎಫ್‌ಐಆರ್

Sexual harassement
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಕಚೇರಿಗೆ ತರಬೇತಿಗೆಂದು ಬರುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿನಿಯರಿಗೆ ವಕೀಲ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣದಲ್ಲಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊದಲ ಆರೋಪಿ ವಕೀಲ ಕೆ.ಎಸ್.ಎನ್.ರಾಜೇಶ್, ಎರಡನೇ ಆರೋಪಿ ಧ್ರುವ, ಮೂರನೇ ಆರೋಪಿ ಮಹಾಲಕ್ಷ್ಮಿ ಹೆಗ್ಡೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಪವಿತ್ರಾ ಆಚಾರ್ಯ ಎಂಬುವರ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊದಲ ಪ್ರಕರಣ ಅತ್ಯಾಚಾರ ಯತ್ನ, ಇನ್ನೊಂದು ಪ್ರಕರಣ ವಿಚಾರ ಬಹಿರಂಗ ಪಡಿಸದಂತೆ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿರುವುದು. ಅಶೋಕನಗರದ ಜಾಗೃತ ಮಹಿಳಾ ವೇದಿಕೆಯ ಪವಿತ್ರಾ ಆಚಾರ್ಯ ಸಂತ್ರಸ್ತೆಯ ಸ್ನೇಹಿತೆ ಬಳಿಯಿಂದ ಬೆದರಿಸಿ ಮುಚ್ಚಳಿಕೆ ಬರೆಸಿರುವುದರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಇನ್ನೊಂದೆಡೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net