ಹೋರಾಟ ನಡೆಸಲು ಸಲಹೆ

2 vikram 13
Published on

ಹೋರಾಟ ನಡೆಸಲು ಸಲಹೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಭಾಷೆ ವಿಚಾರವಾಗಿ ನಟ ಕಮಲ ಹಾಸನ ನೀಡಿರುವ ಬೇಜವಾಬ್ದಾರಿತನದ ಹೇಳಿಕೆ ಖಂಡನೀಯ. ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಈ ವಿವಾದ ತಾರ್ಕಿಕ ಅಂತ್ಯ ತಲುಪುವಂತಾಗಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದವು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಮಲ ಹಾಸನ ಹೇಳಿಕೆ ಕುರಿತು ಸಂಘ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ಸಲಹೆ ಸೂಚನೆ ನೀಡಲು ಸೋಮವಾರ ಏರ್ಪಡಿಸಿದ್ದ ಸಾಹಿತಿಗಳ, ಭಾಷಾ ತಜ್ಞರ, ಹೋರಾಟಗಾರರ, ಚಿಂತಕರ, ಭಾಷಾ ಪ್ರೇಮಿಗಳ, ಕಲಾವಿದರ ಸಭೆಯಲ್ಲಿನ ಕೇಳಿ ಬಂದ ಅಭಿಪ್ರಾಯವಿದು.

ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಭಾಷಾ ಸಂಶೋಧಕರು, ಸಾಹಿತಿಗಳು ಭಾಷಾ ಕುರಿತು ಮಾತನಾಡಿದರೆ ಅರ್ಥ ಇರಲಿದೆ. ಭಾಷಾ ಇತಿಹಾಸದ ಗಂಧ ಗಾಳಿಯೂ ಇಲ್ಲದ ಕಮಲ ಹಾಸನ್ ಹೇಳಿಕೆ ಬೇಜವಾಬ್ದಾರಿಯದ್ದಾಗಿದೆ. ಆದ ಪ್ರಮಾದ ಸರಿಪಡಿಸಲು ತಕ್ಷಣ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡ ಭಾಷೆ ಬಗ್ಗೆ ಎದ್ದಿರುವ ಈ ವಿವಾದ ಅಂತ್ಯ ತಲುಪಲು ನಾಡಿನ ಭಾಷಾ ವಿದ್ವಾಂಸರ, ಇತಿಹಾಸಕಾರರ ಒಂದು ದಿನದ ವಿಚಾರ ಸಂಕಿರಣ ನಡೆಸಬೇಕು ಎಂದರು.

ಡಾ. ಸಂಗಮೇಶ ಸವದತ್ತಿಮಠ ಮಾತನಾಡಿ, ತಮಿಳರ ಭಾಷಾ ಅಂದಾಭಿಮಾನ ಮಿತಿ ಮೀರುವಂತಹದ್ದು. ಕಲಾವಿದನೊಬ್ಬನ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ. ಇದಕ್ಕೆ ಸರಿಯಾಗಿ ಕನ್ನಡಿಗರು ಪ್ರತಿಭಟಿಸುವಂತಾಗಬೇಕು ಎಂದರು.

ಸಾಹಿತಿ ವೆಂಕಟೇಶ ಮಾಚಕನೂರ, ಡಾ. ಬಾಳಣ್ಣಾ ಶೀಗೀಹಳ್ಳಿ, ಶ್ರೀನಿವಾಸ ವಾಡಪ್ಪಿ, ಸಿ.ಯು. ಬೆಳ್ಳಕ್ಕಿ, ಪ್ರಕಾಶ ಉಡಿಕೇರಿ, ಕೆ. ಎಚ್. ನಾಯಕ, ಎಂ.ಎಂ. ಚಿಕ್ಕಮಠ, ಡಾ. ಸದಾಶಿವ ರ್ಮಜಿ, ಡಾ. ಲಿಂಗರಾಜ ಅಂಗಡಿ, ಡಾ. ರಾಮು ಮೂಲಗಿ, ಶಿವಾನಂದ ಮುತ್ತಣ್ಣವರ ಅಭಿಪ್ರಾಯ ತಿಳಿಸಿದರು.

ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಮಹೇಶ ಹೊರಕೇರಿ, ಶಶಿಧರ ತೋಡಕರ, ಪ್ರಕಾಶ ಮಲ್ಲಿಗವಾಡ, ಶ್ರೀಧರ ಗಸ್ತಿ, ಪ್ರಭು ಹಂಚಿನಾಳ, ಸಂಜೀವ ದುಮಕನಾಳ, ಇತರರು ಇದ್ದರು.

ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net