

ಮಸ್ಕಿ: ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಏ.11ರಂದು ಬೆಳಗ್ಗೆ 10 ಗಂಟೆಗೆ ಶಿಕ್ಷಕ ಹಾಗೂ ಸಾಹಿತಿ ಆದಪ್ಪ ಹೆಂಬಾ ಅವರ ‘ಅದ್ವಿತಾ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಮಹಾಂತೇಶ ಮಸ್ಕಿ ಅಧ್ಯಕ್ಷತೆವಹಿಸುವರು. ಗಜಲ್ ಕವಿ ಮಂಡಲಗಿರಿ ಪ್ರಸನ್ನ ಅವರು ಕಾದಂಬರಿ ಬಿಡುಗಡೆ ಮಾಡುವರು. ಡಯಟ್ ನಿವೃತ್ತ ಉಪನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಕೃತಿ ಪರಿಚಯ ಮಾಡಿಕೊಡುವರು.
ನಿವೃತ್ತ ಶಿಕ್ಷಕ ಅರವಿಂದ ಶ್ಯಾಸಲ್, ಪತ್ರಕರ್ತ ವೀರೇಶ ಸೌದ್ರಿ, ಲೇಖಕ ಆದಪ್ಪ ಹೆಂಬಾ ಭಾಗವಹಿಸುವರು ಎಂದು ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕ ಗುಂಡುರಾವ್ ದೇಸಾಯಿ ತಿಳಿಸಿದ್ದಾರೆ.