

ಹುಕ್ಕೇರಿ: ಸ್ಥಳೀಯ ಅಡವಿಸಿದ್ಧೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ(ರಾಜು) ಗುರುಲಿಂಗಪ್ಪ ಮುನ್ನೋಳಿ ಮತ್ತು ಉಪಾಧ್ಯಕ್ಷರಾಗಿ ಪ್ರಜ್ವಲ ಮಹಾವೀರ ನಿಲಜಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಅಡವಿಸಿದ್ಧೇಶ್ವರ ಪಿಕೆಪಿಎಸ್‌ಸಂಘದ ಕಾರ್ಯಾಲಯದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಮಾರ್ಗದರ್ಶನದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಜರುಗಿತು.
ಸಂಘದ ಅಧ್ಯಕ್ಷ ರಾಜು ಮುನ್ನೋಳಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯರ ಮತ್ತು ಹಿರಿಯರ ಸಲಹೆ ಪಡೆದು ಸಂಘ ಹಾಗೂ ರೈತ ಸದಸ್ಯರ ಶ್ರೇಯೋಭಿವದ್ಧಿಗಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಮುಖಂಡರಾದ ಮಹಾವೀರ ನಿಲಜಗಿ, ಜಯಗೌಡ ಪಾಟೀಲ,ಸಿಇಒ ಸುಭಾಷ ಚೌಗಲಾ, ಗುರುರಾಜ ಕುಲಕರ್ಣಿ, ಬ್ಯಾಂಕ್ ನಿರೀಕ್ಷಕ ಮಂಜುನಾಥ ಹಡಾಡಿ, ಸಂಘದ ನಿರ್ದೇಶಕರಾದ ಅನಿಲ ನಾಯಿಕ, ಪ್ರಭಾಕರ ತುಬಚಿ, ರಮೇಶ ತೇರಣಿ, ಮಿಯಾಸಾಬ್ ಮೋಕಾಶಿ, ಸಿದ್ದು ಬೆನ್ನಾಡಿಕರ, ಸುನೀಲ ಬೈರಣ್ಣವರ, ಲಲಿತಾ ಮರಡಿ, ದಾಕ್ಷಾಯಿಣಿ ಅಮ್ಮಣಗಿ ಇತರರಿದ್ದರು.