

ಹುಬ್ಬಳ್ಳಿ: ಲೋಕಹಿತ ಟ್ರಸ್ಟ್ ಸಂಚಾಲಿತ ಪ್ರಗತಿ ಮಹಿಳಾ ಸ್ವಾವಲಂಬನ ಕೇಂದ್ರ ವತಿಯಿಂದ ಇಲ್ಲಿನ ಕೇಶವ ಕುಂಜದಲ್ಲಿ ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಅರಿ ಕೆಲಸದ ತರಬೇತಿ ಪಡೆದವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆರ್ಥಿಕ ಸದೃಢತೆ ಸಿಗುವುದು ಮಹಿಳೆಯರಿಂದ ಮಾತ್ರ. ಹೀಗಾಗಿ ಎಲ್ಲ ಕ್ಷೇತ್ರದ ಉದ್ಯಮವನ್ನು ಆರಂಭಿಸಲು ಅನುಕೂಲಗಳಿವೆ. ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಹ್ವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಶುರಾಮ ಚಿಲ್ಲಾಳ, ರಾಷ್ಟ್ರಸೇವಿಕಾ ಸಮಿತಿಯ ವಕ್ತಾರೆ ಅರ್ಚನಾ ಗೋಡಬಳೆ ಅವರು ಮಾತನಾಡಿದರು. 45 ಮಹಿಳೆಯ ಮಹಿಳೆಯರು ಭಾಗವಹಿಸಿದ್ದರು.