

ಹುಬ್ಬಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆ, ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ರತ್ನಪಾಲ ಎ.ಶೆಟ್ಟಿ ಪಿಯು ಕಾಲೇಜ್ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ 2023-24ನೇ ಸಾಲಿನ ಶಹರ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಬೇಕು. ಇದರಿಂದ ಮನೋದೈಹಿಕ ಆರೋಗ್ಯ ಸ್ಥಿರವಾಗಿರಲಿದೆ ಎಂದರು.
ಖೋಖೋ ಪಂದ್ಯಾವಳಿಯಲ್ಲಿ ಶ್ರೀಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಮಹಿಳಾ ಪಿಯು ಕಾಲೇಜ್ನ ವಿದ್ಯಾರ್ಥಿನಿಯರು ಹಾಗೂ ಕನಕದಾಸ ಪಿಯು ಕಾಲೇಜ್ನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಒಟ್ಟು 28 ಕಾಲೇಜ್ನ ಮಹಿಳಾ ಮತ್ತು ಪುರುಷರ ತಂಡಗಳು ಭಾಗವಹಿಸಿದ್ದವು.
ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ಯು.ಎನ್. ಹಜಾರೆ, ಉದಯ ಧಡೂತಿ, ಬಿ.ಟಿ. ರಾಜಮಾನೆ, ಪ್ರಾಚಾರ್ಯರಾದ ಲೋಹಿತ ಸರ್ಜನ್, ರವಿ ಸಾಬಣ್ಣವರ, ಅಭಿಷೇಕ ಹಂಡಿಗೆ, ತುಕಾರಾಮ ಗೋಧಳೆ, ಹೇಮಾ ವಿರೂಪಾಕ್ಷಪ್ಪ, ಅನಿತಾ ಕೊನೇರಿ, ಹರ್ಷಾ ಆದಪ್ಪನವರ, ಸೋಮಶೇಖರ ಅಣ್ಣಿಗೇರಿ, ರೂಪಾಲಿ ಸಿ., ಮೂರ್ತಿರಾಜ ಹೂಗಾರ, ಲಕ್ಷ್ಮೀ ಗುರವ, ಇತರರು ಇದ್ದರು.