ನಿಯಮಿತವಾಗಿ ರಕ್ತದಾನ ಮಾಡಲು ಸಲಹೆ

Blood donate
Published on

ಹಿರೇಕೆರೂರ: ನಿಯಮಿತ ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವ ಜತೆಗೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಐಕ್ಯುಎಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಾನಗಳಲ್ಲಿ ಅತಿ ಶ್ರೇಷ್ಠವಾದ ರಕ್ತದಾನವು ತುರ್ತು ಚಿಕಿತ್ಸೆ ಸಮಯದಲ್ಲಿ ಬಹಳ ಉಪಯೋಗವಾಗುತ್ತದೆ. ಇದರಿಂದ ಅನೇಕ ಜೀವಗಳು ಬದುಕುಳಿದ ಉದಾಹರಣೆಗಳಿವೆ. ವಿದ್ಯಾರ್ಥಿಗಳು ಇಂತಹ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು. ಪರಿಸರದಲ್ಲಿ ಭಾರಿ ವ್ಯತ್ಯಾಸಗಳು ಉಂಟಾಗುತ್ತಿದ್ದು, ಕಾಲೇಜಿನ ಆವರಣ ಸೇರಿದಂತೆ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ, ಹಾವೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್., ಮಾತನಾಡಿದರು.

ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ, ಅರುಣಕುಮಾರ ಜಿ.ಎನ್., ಉಪನ್ಯಾಸ ನೀಡಿದರು. ಹಾನಗಲ್ಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ವಲಯ ಅರಣ್ಯಾಧಿಕಾರಿ ವೀರೇಶ ಕಣ್ಣನ್, ಉಪವಲಯ ಅರಣ್ಯಾಧಿಕಾರಿ ವಿ.ಬಿ. ಮೊಹಿತೆ, ಪ್ರಾಧ್ಯಾಪಕ ನವೀನ್.ಎಂ., ಮುಜಿಬ್ ರಿಕಾರ್ಟಿ, ಪರಮೇಶಪ್ಪ ಹಲವಾಗಿಲ, ಸಿದ್ದನಗೌಡ ನರೇಗೌಡ್ರ ಇತರರು ಇದ್ದರು. ಪ್ರಾಧ್ಯಾಪಕರಾದ ಡಾ.ಎಲ್.ಎಂ. ಪೂಜಾರ, ಹರೀಶ.ಡಿ., ಹೇಮಲತಾ ಕೆ., ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net