ನಗರ ಇನ್ನಷ್ಟು ಸ್ಮಾರ್ಟ್ ಆಗಲು ಸಲಹೆ ನೀಡಿ: ಕೆ.ಎಸ್.ಈಶ್ವರಪ್ಪ

smart shivamogg
ಸಾರ್ವಜನಿಕರಿಂದ ಅಭಿವೃದ್ಧಿ ಸಂಬಂಧಿತ ಸಲಹೆ ಸಂಗ್ರಹ ಅಭಿಯಾನಕ್ಕೆ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಎಸ್.ಎನ್.ಚನ್ನಬಸಪ್ಪ, ಗಿರೀಶ್ ಪಟೇಲ್, ಎಸ್.ಶಿವಕುಮಾರ್, ಜಗದೀಶ್, ಲಕ್ಷ್ಮೀ ಶಂಕರ ನಾಯ್ಕ, ಗಿರೀಶ್ ಪಟೇಲ್ ಮುಂತಾದವರಿದ್ದರು.
Published on

ಶಿವಮೊಗ್ಗ: ಶಾಸಕ ಎಸ್.ಎನ್.ಚನ್ನಬಸಪ್ಪ ಸಾರ್ವಜನಿಕರಿಂದ ಅಭಿವೃದ್ಧಿ ಪರ ಸಲಹೆಗಳನ್ನು ಪಡೆಯುವ ಜತೆಗೆ ಸಮಸ್ಯೆಗಳನ್ನು ಅರಿಯಲು ಸಲಹೆ ಸಂಗ್ರಹ ಅಭಿಯಾನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸಹಕಾರ ಅಗತ್ಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುರುವಾರ ಸಲಹಾ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ನೀಡಿದ ಸಲಹೆಗಳ ಅನುಷ್ಠಾನಕ್ಕೆ ಬಿಜೆಪಿ ಕಾರ್ಯಕರ್ತರ ಪಡೆ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಜತೆಗೆ, ಶಾಸಕರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆದು ಹೆಚ್ಚಿನ ಮುತುವರ್ಜಿ ವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಲಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಈ ಕಾರ್ಯಕ್ಕೆ ರೂಪಿಸಿರುವ ಕರ್ತವ್ಯ ಪಡೆಯಲ್ಲಿ ಇಂಜಿನಿಯರ್, ವೈದ್ಯರು, ವಿಷಯತಜ್ಞರಿದ್ದಾರೆ. ಶಿವಮೊಗ್ಗ ನಗರ ಸುಸಜ್ಜಿತ, ಸುಂದರ ಮತ್ತು ಮೂಲ ಸೌಲಭ್ಯ ಹೊಂದುವ ರೀತಿಯಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಸಲಹಾ ಸಂಗ್ರಹ ಅಭಿಯಾನವು ಆ.31ರವರೆಗೆ ನಡೆಯಲಿದೆ. 35 ವಾರ್ಡ್‌ಗಳು ಹಾಗೂ 50 ಪ್ರಮುಖ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುವುದು. ನಗರವನ್ನು ಇನ್ನಷ್ಟು ಸ್ಮಾರ್ಟ್ ಮಾಡುವಲ್ಲಿ ಸಾರ್ವಜನಿಕರ ಸಲಹೆಗಳು ಪರಿಣಾಮಕಾರಿಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net