

ಹುಬ್ಬಳ್ಳಿ: ಇಲ್ಲಿನ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ರತ್ನಪಾಲ ಎ. ಶೆಟ್ಟಿ ಪದವಿಪೂರ್ವ ಕಾಲೇಜ್ನಲ್ಲಿ ಗುರುವಾರ 2023-24ನೇ ಸಾಲಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ, ಆಟ-ಪಾಠ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸದೃಢ ದೇಹವಿದ್ದರೆ ಸದೃಢ ಮನಸ್ಸು ಇರುತ್ತದೆ. ಇದರಿಂದ ನಿಮ್ಮ ಕಲಿಕೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಪತ್ರಕರ್ತ ಸನತ್ಕುಮಾರ ಬೆಳಗಲಿ ಮಾತನಾಡಿ, ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾನಸಿಕ ಹಾಗೂ ದೈಹಿಕ ಸದೃಢತೆ ಅಗತ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ಅಣ್ಣಿಗೇರಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ಕೋಶಾಧ್ಯಕ್ಷ ಆರ್.ಟಿ. ತವನಪ್ಪನವರ, ಬಿ.ಟಿ. ರಾಜಮಾನೆ, ಉದಯ ದಢೂತಿ, ಎ.ಸಿ. ನವಲೂರ, ಪ್ರಾಚಾರ್ಯ ಲೋಹಿತ ಸರ್ಜನ್, ಡಾ. ಸುಜಾತ ನಲವಡಿ, ಹರ್ಷ ಆದಪ್ಪನವರ, ಅಭಿಷೇಕ ಹಂಡಗಿ, ಅನಿತಾ ಕೊನೇರಿ, ಜಯಶ್ರೀ ಮುಗಳಿ, ಲಕ್ಷ್ಮೀ ಗುರವ, ತುಕಾರಾಮ ಗೊಂದಳೆ, ಪದ್ಮಾ ದಯನ್ನವರ, ಇತರರು ಇದ್ದರು.