

ಸವಣೂರ: ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಂಜಿನಿಯರರು ಸಲಹೆ-ಸೂಚನೆ ನೀಡಿದಲ್ಲಿ ಮತ್ತಷ್ಟು ಉತ್ತಮ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಇಂಜನಿಯರ್ಸ್ ಅಸೋಸಿಯೆಷನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನ ಹಾಗೂ ಇಂಜಿನಿಯರ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಇಂಜಿನಿಯರ್ಸ್ ಅಸೋಸಿಯೆಷನ್ ಪದಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು ಎಂದರು.
ಅಡವಿಸ್ವಾಮಿಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂಜಿನಿಯರ್ಸ್ ಅಸೋಸಿಯೆಷನ್ ತಾಲೂಕು ಅಧ್ಯಕ್ಷ ಸಿ.ಬಿ. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಎಂ. ಪಾಟೀಲ, ಜೀಶಾನಖಾನ್ ಪಠಾಣ, ತಾಲೂಕು ಗೌರವಾಧ್ಯಕ್ಷ ಎನ್.ಬಿ. ಕಟಗಿ, ಉಪಾಧ್ಯಕ್ಷ ಜೀಶಾನಖಾನ್ ನಾಗಡ, ಬಸವರಾಜ ಬಾಗೇವಾಡಿ, ರವಿಕಿರಣ ಮೂಲಿಮಠ, ಕಿರಣಕುಮಾರ ತೆಗ್ಗಿಹಳ್ಳಿ, ಜಿ.ವಿ. ಪಾಟೀಲ, ಸದಸ್ಯರು ಇದ್ದರು.