ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಸಲಹೆ

h25-tenginakai
Published on

ಹುಬ್ಬಳ್ಳಿ: ಆಶೀರ್ವಾದ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಹಾಗೂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಇಲ್ಲಿಯ ಸಿದ್ದೇಶ್ವರ ಆಶ್ರಯ ಕಾಲನಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಇಂಥ ಶಿಬಿರಗಳು ಮೇಲಿಂದ ಮೇಲೆ ನಡೆಯುತ್ತಿದ್ದರೆ ವಿವಿಧ ರೋಗಗಳಿಗೆ ಕಡಿವಾಣ ಹಾಕಬಹುದು. ದುಬಾರಿ ದುನಿಯಾದಲ್ಲಿ ಬಡವರಿಗೆ ಈ ಶಿಬಿರಗಳಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಮಹಾಪೌರ ವೀಣಾ ಚೇತನ ಬರದ್ವಾಡ, ಪ್ರಮುಖರಾದ ಡಾ. ಶಶಿಕುಮಾರ ಪಟ್ಟಣಶೆಟ್ಟಿ, ಚೇತನ ಬಾರದ್ವಾಡ, ವೀರಣ್ಣ ಸಜ್ಜನರ, ಸಿದ್ದಣ್ಣ ಕೊಟ್ಟುರಶೆಟ್ಟರ, ಡಾ. ವಿನೋದ ಮಾಕಣ್ಣನವರ, ಪ್ರವೀಣ ಹುರಳಿ, ಎ.ಎಸ್. ಮುದಗಲ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net