

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ 76ನೇ ಗಣರಾಜೋತ್ಸವವನ್ನು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು .
ಮಾಜಿ ಯೋಧ, ಅಂತಾರಾಷ್ಟ್ರೀಯ ಶೂಟರ್ ತರಬೇತುದಾರ ರವಿಚಂದ್ರ ಬಾಳೆಹೂಸುರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ತಂದೆ-ತಾಯಿಯ ಗೌರವ ಹೆಚ್ಚಿಸಬೇಕು ಎಂದರು.
1998ನೇ ಹಳೆಯ ಬ್ಯಾಚ್‌ನ ವಿದ್ಯಾರ್ಥಿಗಳ ಅಮೃತ ಮಹೋತ್ಸವ ನಿಮಿತ್ತ ಪುನರ್‌ಮಿಲನ ಹಾಗೂ ವಾಕಥಾನ್ ಜರುಗಿತು. ಕೆಎಲ್ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಿಂದ ಬಿವಿಬಿ ಕಾಲೇಜ್‌ವರೆಗೆ ವಾಕಥಾನ್ ನಡೆಯಿತು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಆರ್. ಪಾಟೀಲ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಾಬಾ ಬೂಸದ, ಪ್ರಾಚಾರ್ಯರಾದ ಪ್ರೊ.ಎಸ್.ಎಲ್. ಪಾಟೀಲ, ಡಾ.ಡಿ.ಕೆ. ವಾಘಮೋಡೆ, ಸಂಚಾಲಕಿ ಡಾ. ನೇತ್ರಾವತಿ ಗಬ್ಬೂರ, ಪ್ರೊ. ಬಸವರಾಜ ಹುಬ್ಬಳ್ಳಿ, ಎನ್‌ಸಿಸಿಯ ಅಸ್ಲಾಂ ಕೂಂಕಣಿ, 800ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು. ವಾಕಥಾನ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಕಾಲೇಜ್ ಚಿತ್ರವಿರುವ ಪದಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.