ಸಕಾಲದಲ್ಲಿ ಸಾಲ ಮರುಪಾವತಿಸಲು ಸಲಹೆ

veerashaiva
Published on

ಬ್ಯಾಡಗಿ: ಸಾಲ ಪಡೆದವರು ಸಕಾಲಕ್ಕೆ ಭರಿಸಿದಲ್ಲಿ ಹಣಕಾಸು ಸಂಸ್ಥೆಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪತ್ತಿನ ಸಂಘದ ಅಧ್ಯಕ್ಷ ಜಯದೇವ ಶಿರೂರು ಹೇಳಿದರು.

ಪಟ್ಟಣದ ಆದರ್ಶ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನಾಲ್ಕು ವರ್ಷಗಳ ಹಿಂದೆ ಆರಂಭವಾದ ಸಹಕಾರಿ ಸಂಘದಲ್ಲಿ ಷೇರುದಾರರ ಸಂಖ್ಯೆ ಏರಿಕೆಯಾಗಿದೆ. ಸಾರ್ವಜನಿಕರು ಹೆಚ್ಚು ಷೇರು, ಡಿಪಾಜಿಟ್ ಸೇರ್ಪಡೆಗೊಳಿಸಿದಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ. ಮುಂದಿನ ಬಾರಿ ಐದನೇ ವಾರ್ಷಿಕೋತ್ಸವ ನಿಮಿತ್ತಹೊಸ ಯೋಜನೆ ಘೋಷಿಸಲಾಗುವುದು ಎಂದರು.

ನಿರ್ದೇಶಕರಾದ ಬಸವರಾಜ ಕಡೆಕೋಪ್ಪ, ಶಿವಪ್ಪ ಹರಮಗಟ್ಟಿ, ಚನ್ನವೀರಪ್ಪ ಬಳ್ಳಾರಿ, ವೀರಣ್ಣ ಅಂಗಡಿ, ಉಮೇಶ ಚೌದರಿ, ವೀರಭದ್ರಪ್ಪ ಗೊಡಚಿ, ತಿರಕಪ್ಪ ಮರಬಸಣ್ಣನವರ, ಪಾರ್ವತೆವ್ವ ಗಡಾದ, ಎಂ.ಸಿ. ಯರಗಲ್ಲ, ಹನುಮಂತಪ್ಪ ಕುರುಡಮ್ಮನವರ, ಶೋಭಾ ಹೊಸಮನಿ, ದೇವರಾಜ ಬುಡ್ಡನಗೌಡ್ರ, ಶಂಕರಗೌಡ್ರ ಪಾಟೀಲ, ಮಂಜುನಾಥ ಪೂಜಾರ ವ್ಯವಸ್ಥಾಪಕ ಲೋಹಿತ ಸೊಲಬಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net