ಜೀವನದ ಮೂಲ ಅರಿತುಕೊಳ್ಳಲು ಸಲಹೆ

h10-kle
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಹಾವೇರಿ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಉದ್ಘಾಟಿಸಿ ಮಾತನಾಡಿ, ತಮ್ಮ ಬದುಕಿನ ಮೂಲ ಉದ್ದೇಶವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ತಂದೆ, ತಾಯಿ ಹಾಗೂ ಗುರುವಿಗೆ ಗೌರವ ಕೊಡಬೇಕು. ಸಂಸ್ಕೃತಿ, ಪ್ರಕೃತಿ ಮತ್ತು ವಿಕೃತಿಗಳ ಮಧ್ಯದ ಆಳ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಾಬಾ ಬೂಸದ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜ್ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಬಸವರಾಜ ಹುಬ್ಬಳ್ಳಿ ಅಧಿಕಾರ ಸ್ವೀಕಾರ ಹಾಗೂ ಬ್ಯಾಡ್ಜ್ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಂ.ಆರ್. ಪಾಟೀಲ, ಪ್ರಾಚಾರ್ಯರಾದ ಡಾ.ಡಿ.ಕೆ. ವಾಘ್ಮೋಡೆ, ಪ್ರೊ.ಎಸ್.ಎಲ್. ಪಾಟೀಲ, ಡಾ. ಗೀತಾ ಕರಾಡೆ, ಡಾ. ಸೌಮ್ಯಶ್ರೀ ಹೆಗಡೆ, ಡಾ. ನೇತ್ರಾವತಿ ಗಬ್ಬೂರ, ಪ್ರೊ. ಪ್ರತಿಭಾ ಕೆ., ಕ್ರೀಡಾ ವಿಭಾಗದ ವಿದ್ಯಾರ್ಥಿ ರೋಹಿತ ಬಡಗಲ್ಲರ, ಕೆ.ಎಸ್. ಶ್ರೀಷಾ, ಪೂಜಾ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net