ಇಷ್ಟಪಟ್ಟು ಓದಲು ಸಲಹೆ

h13-adarsh college
Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದ ಆದರ್ಶ ಪಿಯುಸಿ ಕಾಲೇಜ್‌ನಲ್ಲಿ ಇತ್ತೀಚೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು, ಆಸಕ್ತಿಯಿಂದ ಓದಬೇಕು. ಕಾಲೇಜು ಹಂತದ ಶಿಕ್ಷಣವೇ ನಿಜವಾದ ಶಿಕ್ಷಣ. ನಿಮ್ಮ ಭವಿಷ್ಯ ರೂಪಿತಗೊಳ್ಳುವುದು ಇದೇ ಹಂತದಲ್ಲಿ ಎಂದರು.
ಪ್ರೊ. ಎಸ್.ಬಿ. ಕುನ್ನೂರ, ಪ್ರೊ. ಬಿ.ಸಿ. ಗೌಡರ, ಪ್ರೊ. ಡ್ಯಾನಿಯಲ್ ಹೊಸಕೇರಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪುಷ್ಪ ಮತ್ತು ಸಿಹಿ ನೀಡಿ, ಆರತಿ ಬೆಳಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿ ತನುಶ್ರೀ ರಟ್ಟಿಹಳ್ಳಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಸುನಂದಾ ಮೆಣಸಿನಕಾಯಿ ಸ್ವಾಗತಿಸಿದರು. ರಶ್ಮೀ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net