ಪರಿಸರ ವಿರೋಧಿ ಕೃತ್ಯ ತಡೆಯಲು ಸಲಹೆ

19 hbv 1
Published on

ಹಂಸಭಾವಿ: ನೆಮ್ಮದಿಯ ಬದುಕಿಗೆ ಮಾರಕವಾಗಿ ಪರಿಣಮಿಸಿರುವ ಪರಿಸರ ವಿರೋಧಿ ಕಾರ್ಯಗಳನ್ನು ತಡೆಯಲು ಎಲ್ಲರೂ ಶ್ರಮಿಸುವುದು ಅಗತ್ಯವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ವಿಜಯ ಮೂಡಬಾಗಿಲ ಹೇಳಿದರು.

ಸ್ಥಳೀಯ ಮೃತ್ಯುಂಜಯ ವಿದ್ಯಾಪೀಠದ ಅಂಗ ಸಂಸ್ಥೆಯ ಇಕೋ ಕ್ಲಬ್, ಯುತ್ ರೆಡ್​ಕ್ರಾಸ್, ಪ್ರಾಣಿಶಾಸ್ತ್ರ ವಿಭಾಗ, ಎನ್​ಸಿಸಿ, ಎನ್​ಎಸ್​ಎಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಹಾಗೂ ಹಿರೇಕೆರೂರ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮೃತ್ಯುಂಜಯ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಬತ್ತೂರು, ಯುವರಾಜ ಭಜಂತ್ರಿ, ಸಂಸ್ಥೆಯ ಸದಸ್ಯರಾದ ಪ್ರಭಣ್ಣ ಬಳಗಾನೂರ, ಆಡಳಿತಾಧಿಕಾರಿ ಸತೀಶ ಕಬ್ಬಿಣದ ಭಾಗವಹಿಸಿದ್ದರು. ವೆಂಕಟೇಶ ಪಿ. ಸ್ವಾಗತಿಸಿದರು, ವಿರೂಪಾಕ್ಷಪ್ಪ ವೈ.ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net