ಭಾಷೆ ಉಳಿಸಿ ಬೆಳೆಸಲು ಸಲಹೆ

LANGUAGE
Published on

ಲಕ್ಷ್ಮೇಶ್ವರ: ಶಿಕ್ಷಣ ಪಡೆದ ವ್ಯಕ್ತಿಗಳ ಬದುಕಿನಲ್ಲಿ ಮೌಲ್ಯಗಳು ಬೆಳೆಯಬೇಕು. ಆದರೆ, ಇಂದಿನ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ನಿವೃತ್ತ ಶಿಕ್ಷಕ ಶಂಕ್ರಣ್ಣ ಮೆಳ್ಳಳ್ಳಿ ಹೇಳಿದರು.

ಶಿಗ್ಲಿ ಕಸಾಪ ಹೋಬಳಿ ಘಟಕದಿಂದ ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ, ಧರ್ಮದ ಬೇಧಗಳ ಭಾವನೆ ಶಿಕ್ಷಣದಲ್ಲಿ ನುಗ್ಗುತ್ತಿವೆ. ರಾಜಕೀಯ ಪಕ್ಷಗಳು ತಮಗೆ ಬೇಕಾದ ಜಾತಿ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸುತ್ತಿವೆ. ಇದು ಮೌಲ್ಯಗಳ ಅಧಃಪತನಕ್ಕೆ ಕಾರಣವಾಗಿದೆ ಎಂದರು.

ಕಸಾಪ ಶಿಗ್ಲಿ ಹೋಬಳಿ ಘಟಕದ ಗೌರವಾಧ್ಯಕ್ಷ ಪ್ರವೀಣ ಹುಲಗೂರ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕನ್ನಡ ಉಳಿಸಿ ಬೆಳೆಸುವ ಉದ್ದೇಶದಿಂದ ಹೋಬಳಿ ಘಟಕದ ವತಿಯಿಂದ ಮನೆ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಶ್ರೀಮಂತ ಭಾಷೆ. ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದರು.

ಹೋಬಳಿ ಘಟಕದ ಅಧ್ಯಕ್ಷ ರಾಜು ರಜಪೂತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಂದ್ರು ಕರ್ಜಗಿ ದಂಪತಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎನ್.ಡಿ. ಮೇಗಲಮನಿ, ಎನ್.ಎನ್. ಅಜ್ಜಪ್ಪಶೆಟ್ಟರ, ನಿವೃತ್ತ ಶಿಕ್ಷಕ ಎಚ್.ವಿ. ಪಾಟೀಲರನ್ನು ಸನ್ಮಾನಿಸಲಾಯಿತು. ಈರಣ್ಣ ಅಳ್ಳಳ್ಳಿ, ಅಮರೇಶ್ವರ ಹುಲಗೂರ, ವೀರಣ್ಣ ಅಕ್ಕೂರ, ಎನ್.ಎಂ. ಅರಳಿ, ಬಿ.ಕೆ. ಹತ್ತಿಕಾಳ, ಸೋಮು ಬಸರಿ, ಮಂಜುನಾಥ ಗೋಣೆಪ್ಪನವರ, ಬಸವರಾಜ ಹಾಳಕೇರಿ, ಸದಾ ಬಾಳಿಕಾಯಿ, ರಾಮಣ್ಣ ಲಮಾಣಿ, ಕೇಶವ ಗುಲಗಂಜಿ ಇದ್ದರು. ಮಂಜುನಾಥ ಶಂಭೋಜಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net