

ಹುಬ್ಬಳ್ಳಿ: ಸಾಯಿ ಲೇಔಟ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಬಿಜೆಪಿ ಯುವ ಮುಖಂಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರು ಧ್ವಜಾರೋಹಣ ನೆರೆವರಿಸಿದರು.
ನಂತರ ಮಾತನಾಡಿ, ನಮ್ಮ ಸಂವಿಧಾನವು 1949ರ ನವೆಂಬರ್ 26ರಂದು ಅಂಗೀಕಾರವಾಯಿತು. 1950ರ ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ನಾವು ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಇದು 76ನೇ ಗಣರಾಜ್ಯೋತ್ಸವ. ಭಾರತ ಗಣರಾಜ್ಯವಾಗಲೂ, ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಎಲ್ಲರನ್ನೂ ಸಹ ನೆನೆಯುವ ದಿನ. ಸಂವಿಧಾನದ ನಿಯಮಗಳನ್ನು ಪಾಲಿಸಬೇಕು. ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕ ಸೇರಿ ಇತರ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿರುವ ಬೃಹತ್ ಸಂವಿಧಾನವಾಗಿದೆ. ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್. ಆದ್ದರಿಂದ ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ಪಿತಾಮಹ ಎಂದು ಕರೆಯುತ್ತೇವೆ ಎಂದರು.
ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ಪೂಜಾರ, ಕಾರ್ಯದರ್ಶಿ ಸುಮಾ ಕುಲಕರ್ಣಿ, ಸಹ ಕಾರ್ಯದರ್ಶಿ ಸಂಜು ಕೌಜಲಗಿ ಇತರರು ಉಪಸ್ಥಿತರಿದ್ದರು.