ತಿಗಣೆ ನಿಯಂತ್ರಣಕ್ಕೆ ರೈತರಿಗೆ ಸಲಹೆ

Tigane
Published on

ಮುಂಡಗೋಡ: ತಾಲೂಕಿನಲ್ಲಿ ಭತ್ತದ ಬೆಳೆಗೆ ತಿಗಣೆ ಬಾಧೆ ಕಾಣಿಸಿಕೊಂಡಿದ್ದು, ರೈತರು ಸೂಕ್ತ ಔಷಧ ಸಿಂಪಡಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಸಲಹೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಸಾವಿರಾರು ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಇದೀಗ ಭತ್ತದ ತೆನೆ ಮೂಡುತ್ತಿದೆ. ವಾತಾವರಣದಲ್ಲಿನ ಏರುಪೇರಿನಿಂದಾಗಿ ಭತ್ತದ ತೆನೆಗೆ ತಿಗಣೆ ಕೀಟ ಬಾಧೆ ಕಾಣಿಸಿಕೊಂಡಿದೆ. ಹತೋಟಿಗೆ ರೈತರು ಬದುಗಳಲ್ಲಿ ಬೆಳೆದ ಹುಲ್ಲು ಮತ್ತು ಕಳೆಯನ್ನು ಕಾಲ ಕಾಲಕ್ಕೆ ಕೊಯ್ದು ಸ್ವಚ್ಛಗೊಳಿಸಬೇಕು. ಪ್ರತಿ ಲೀ.ನೀರಿಗೆ ಮೇಲಾತಿನಿಯನ್ 50ಇಸಿ 2.0ಮಿಲಿ ದ್ರಾವಣವನ್ನು ಹೂವಾಡುವ ಮತ್ತು ನಿರಂತರ ಒಂದು ವಾರದ ಅಂತರದಲ್ಲಿ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೆಂದ್ರಕ್ಕೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net