

ವಿಜಯವಾಣಿ ಸುದ್ದಿಜಾಲ ಧಾರವಾಡ
ಉದ್ದು ಮತ್ತು ಹೆಸರು ಬೆಳೆಗಳಲ್ಲಿ ಸದ್ಯ ಕರಿಮೂತಿ ಹುಳುವಿನ (Apion Weevil) ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಾಧೆ ಕಂಡುಬAದಿದೆ. ಕರಿಮೂತಿ ಹುಳು ಹೂವಾಡುವ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಯಿಗಳು ಬಲಿಯುವವರೆಗೆ ಇರುತ್ತದೆ. ಈ ಹುಳುವಿನ ಬಾಧೆಯಿಂದ ಶೇ. 45ರಿಂದ 100ರಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಕರಿಮೂತಿ ಹುಳುವಿನ ನಿರ್ವಹಣೆಗೆ ಹೂವಾಡುವ ಸಮಯದಲ್ಲಿ 2 ಮಿ.ಲೀ. ಪ್ರೊಫೆನೊಪಾಸ್ 50 ಇ.ಸಿ. ಅಥವಾ 0.5 ಮಿ.ಲೀ. ಲ್ಯಾಮ್ಡಾಸೈಹಲೋಥ್ರಿನ್ 5 ಇ.ಸಿ. ಅಥವಾ 0.3 ಗ್ರಾಂ ಇಮಾಮೆಕ್ಟಿನ್ ಬೆಂಝೊಯೆಟ್ 5 ಎಸ್.ಜಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಹೆಕ್ಟೇರ್‌ಗೆ 500 ಲೀ. ಸಿಂಪಡಣಾ ದ್ರಾವಣ ಅಗತ್ಯ. ಪ್ರೌಢ ಕೀಟಗಳ ಸಂಖ್ಯೆ ಹೆಚ್ಚಾಗಿದ್ದರೆ 10 ದಿನಗಳ ಅಂತರದಲ್ಲಿ ಪುನಃ ಸಿಂಪಡಣೆ ಮಾಡಬೇಕು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.