

ಹುಬ್ಬಳ್ಳಿ: ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ, ಧಾರವಾಡ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಇಲ್ಲಿಯ ಆನಂದ ನಗರದ ಫತೇಶಾವಲಿ ನಗರದ ಶಾದಿ ಮಹಲ್‌ನಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಪಾಲಿಕೆ ಮಾಜಿ ಸದಸ್ಯ ಹಜರತ್ ಅಲಿ ಎಂ. ದೊಡ್ಡಮನಿ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ನಮ್ಮ ಸಮಾಜವು ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಗತಿಹೊಂದಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಬೇಕು. ಜತೆಗೆ ನಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಸಮರ್ಥರಾಗಲು ಪ್ರೋತ್ಸಾಹಿಸಬೇಕು ಎಂದರು.
ರಾಜ್ಯ ಪ್ರತಿನಿಧಿ ಪಿ.ಬಿ. ನದಾಫ್, ಧಾರವಾಡ ಜಿಲ್ಲಾಧ್ಯಕ್ಷ ಎಫ್.ಎಂ. ನದಾಫ್, ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಎಚ್. ಬೆಂಡಿಗೇರಿ, ಡಿ.ಬಿ. ಹಸನಪೀರ, ಎಚ್.ಎ. ಜಾಕೀರ ಹುಸೇನ್, ಎಚ್.ಎಲ್. ನದಾಫ್, ಎನ್.ಎಸ್. ನದಾಫ್, ದಾವಲಸಾಬ್ ನದಾಫ್, ರಫೀಕಅಹ್ಮದ್ ದೂಡ್ಡಮನಿ, ಗೌಸ ನದಾಫ್, ಖುದಾನಸಾಬ್ ಗೂಗಲ್, ಎಂ.ಎ. ನದಾಫ್, ಅಬ್ದುಲ್‌ನಬಿ ನದಾಫ್, ಇಸ್ಮಾಯಿಲ್‌ಸಾಬ್ ನದಾಫ್ ಸೇರಿದಂತೆ ಬಹಳಷ್ಟು ಜನರು ಉಪಸ್ಥಿತರಿದ್ದರು.